ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಭಾರತ 86 ರನ್ ಗಳಿಂದ ಸೋತಿರಬಹುದು. ಹಾಗಿದ್ದರೂ ವೈಯಕ್ತಿಕವಾಗಿ ಕ್ರಿಕೆಟಿಗ ಧೋನಿಗೆ ಈ ಪಂದ್ಯ ಸ್ಮರಣೀಯವಾಗಿದೆ.
ಈ ಪಂದ್ಯದಲ್ಲಿ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸುವಾಗ ಗಟ್ಟಿಯಾಗಿ ನಿಂತ ಧೋನಿ 37 ರನ್ ಗಳಿಸಿದರು. ಅವರು 33 ರನ್ ಗಳಿಸಿದಾಗ ವಿಶ್ವದಾಖಲೆ ಬರೆದರು.
ಏಕದಿನ ಕ್ರಿಕೆಟ್ ನಲ್ಲಿ 10000 ರನ್ ಗಳಿಸಿದ ವಿಶ್ವದ 12 ನೇ ಮತ್ತು ಭಾರತ 4 ನೇ ಆಟಗಾರ ಎಂಬ ದಾಖಲೆಯನ್ನು ಧೋನಿ ನಿನ್ನೆ ಮಾಡಿದರು. ಅದರ ಜತೆಗೆ ವಿಕೆಟ್ ಕೀಪರ್ ಆಗಿ ಈ ಸಾಧನೆ ಮಾಡಿದ ದ್ವಿತೀಯ ಆಟಗಾರರೆನಿಸಿಕೊಂಡರು. ಕುಮಾರ್ ಸಂಗಕ್ಕಾರ ಮೊದಲ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.