ಬಳ್ಳಾರಿ : ಬೆಳ್ಳಂಬೆಳಗ್ಗೆ ಸಚಿವ ಭೈರತಿ ಬಸವರಾಜ್ ಪಾಲಿಕೆ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ಸಚಿವ ಭೈರತಿ ಬಸವರಾಜ್ ಬಳ್ಳಾರಿ ಸಿಟಿ ರೌಂಡ್ ಹಾಕಿದ್ದಾರೆ. ಆ ವೇಳೆ ನಗರದ ಸ್ವಚ್ಛತೆ ಪರಿಶೀಲಿಸಿದ್ದ ಸಚಿವರಿಗೆ ತೆರೆದ ಡ್ರೈನೇಜ್ ಕಂಡು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಬೇಜವಬ್ದಾರಿ ತೋರಿದ ಪಾಲಿಕೆ ಅಧಿಕಾರಿಗಳನ್ನು ಸಚಿವರು ತರಾಟೆ ತೆಗೆದುಕೊಂಡಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಡ್ರೈನೇಜ್ ಗಳನ್ನು ಬೇಗ ಕ್ಲೋಸ್ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.