Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೆಟ್ರೋ ಸೇವೆ ಸ್ಥಗಿತ- ಇಂದು ರಾತ್ರಿ 9:30 ರಿಂದ ಬೆಳಗ್ಗೆ 7 ಗಂಟೆ ವರೆಗೂ.

ಮೆಟ್ರೋ ಸೇವೆ ಸ್ಥಗಿತ- ಇಂದು ರಾತ್ರಿ 9:30 ರಿಂದ ಬೆಳಗ್ಗೆ 7 ಗಂಟೆ ವರೆಗೂ.
ಬೆಂಗಳೂರು , ಭಾನುವಾರ, 26 ಜೂನ್ 2022 (10:08 IST)
ಬೆಂಗಳೂರು : ಇಂದು ರಾತ್ರಿ 9:30 ರಿಂದ ಭಾನುವಾರ ಬೆಳಗ್ಗೆ 7 ಗಂಟೆ ವರೆಗೂ ನೇರಳೆ ಮಾರ್ಗದ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
 
ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿ ನಡೆಯಲಿದೆ. ಹೀಗಾಗಿ ನೇರಳೆ ಮಾರ್ಗದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ವರೆಗೆ ವಾಣಿಜ್ಯ ಸೇವೆಯನ್ನು ಇಂದು ರಾತ್ರಿ 9:30 ಗಂಟೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.

ನೇರಳೆ ಮಾರ್ಗದಲ್ಲಿ ಕೊನೆಯ ಮೆಟ್ರೋ ರೈಲು ಸೇವೆಯು ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ರಾತ್ರಿ 8:40 ಗಂಟೆಗೆ ಹೊರಡಲಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ ಕೊನೆಯ ಮೆಟ್ರೋ ರೈಲು ಸೇವೆ ರಾತ್ರಿ 9:30 ಗಂಟೆಗೆ ಲಭ್ಯವಿರುತ್ತದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಹೋಗುವ ಕೊನೆಯ ರೈಲು ಸೇವೆ ರಾತ್ರಿ 9:10ರ ವರೆಗೆ ಲಭ್ಯವಿರುತ್ತದೆ.
ಆದಾಗ್ಯೂ, ಮೆಟ್ರೋ ರೈಲು ಸೇವೆಯು ಎಂ.ಜಿ. ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ರಾತ್ರಿ 9:30ರಿಂದ ರಾತ್ರಿ 11 ಗಂಟೆ ವರೆಗೆ ವೇಳಾಪಟ್ಟಿಯ ಪ್ರಕಾರ ಲಭ್ಯವಿರುತ್ತದೆ. ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ವೇಳಾಪಟ್ಟಿಯ ಪ್ರಕಾರ ಸೇವೆ ಲಭ್ಯವಿರುತ್ತದೆ ಎಂದು ವಿಶೇಷ ಸೂಚನೆ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಜೊತೆ ಸುತ್ತಾಡಲು ಬಂದವಳು ಪ್ರಿಯಕರನ ಜೊತೆ ಎಸ್ಕೇಪ್