ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಮೇಲ್ಸೇತುವೆ, ಮೆಟ್ರೋ ನಿಲ್ದಾಣದಲ್ಲಿ ಹೊಸ ಪ್ರವೇಶ ದ್ವಾರಕ್ಕೆ ಸಿಎಂ ಚಾಲನೆ ನೀಡಿದರು.
ಬೈಯಪ್ಪನ ಹಳ್ಳಿ, ಮೈಸೂರು ರಸ್ತೆ ಮಾರ್ಗದಲ್ಲಿ ನೂತನ ಆರು ಬೋಗಿಗಳ ಸಂಚಾರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
1.40 ಕೋಟಿ ರೂ. ವೆಚ್ಚದಲ್ಲ 100 ಮೀಟರ್ ಉದ್ದದ ಪಾದಚಾರಿ ಮೇಲ್ಸೇತುವೆ ಎಎಸ್ ಆರ್ ಟಿಸಿ, ಬಿಎಂಟಿಸಿ ನಿಲ್ದಾಣವಲ್ಲದೇ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೇಲ್ವೆ ನಿಲ್ದಾಣ, ಆನಂದ ವೃತ್ತ, ಗಾಂಧಿನಗರ ಮತ್ತಿತರ ಕಡೆ ಸಂಪರ್ಕ ಕಲ್ಪಿಸಲಾಗಿದೆ.
ಈವರೆಗೆ ಈ ನಿಲ್ದಾಣಗಳಿಗೆ ನೇರವಾದ ಸಂಪರ್ಕ ಇರಲಿಲ್ಲ. ಹೀಗಾಗಿ ಜನರಿಗೆ ತೊಂದರೆಯಾಗುತ್ತಿತ್ತು. ಈಗ ಮೆಟ್ರೋ ಹಾಗೂ ಇತರ ನಿಲ್ದಾಣಗಳಿಗೆ ತೆರಳಲು ಜನರು ಮೇಲ್ಸೇತುವೆ ಬಳಸಿಕೊಳ್ಳಬಹುದಾಗಿದೆ.