Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮ್ಮ ಮೆಟ್ರೊಗೆ ಶ್ರೀ ಜಗಜ್ಯೋತಿ ಬಸವೇಶ್ವರ ಮೆಟ್ರೋ ನಾಮಕರಣಕ್ಕೆ ಮನವಿ

ನಮ್ಮ ಮೆಟ್ರೊಗೆ  ಶ್ರೀ ಜಗಜ್ಯೋತಿ ಬಸವೇಶ್ವರ ಮೆಟ್ರೋ  ನಾಮಕರಣಕ್ಕೆ ಮನವಿ
bangalore , ಮಂಗಳವಾರ, 6 ಜುಲೈ 2021 (13:54 IST)
ಬೆಂಗಳೂರಿನ ಪ್ರತಿಷ್ಠಿತ ನಮ್ಮ ಮೆಟ್ರೊಗೆ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಾಕ್ಷರಾದ ಡಾ. ಶರಣಪ್ಪ ಎಂ.ಕೊಟಗಿ ನೇತೃತ್ವದಲ್ಲಿ   ರಾಜ್ಯ ಸರ್ಕಾರವನ್ನು ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿಯಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಬೇಟಿಯಾಗಿ ಮನವಿ ಅರ್ಪಿಸಿದರು.
ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರು 12 ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವ ದ ಅರಿಯು ಮೂಡಿಸಿ ಈಗಿನ ಸಂವಿಧಾನದ ಕಲ್ಪನೆಯನ್ನು ಆಗಲೇ ಪ್ರೇರೆಪಿಸಿದ್ದರು ಅಂತಹ ಮಹನೀಯರ ಹೆಸರನ್ನು ಮೇಟ್ರೋಗೆ ನಾಮಕರಣ ಮಾಡಬೇಕದಿದ್ದು ಒತ್ತಾಯಿಸಲಾಗಿದೆ.
ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಜಾತ್ಯಾತೀತ ಮನೋಭಾವವನ್ನು ತಿಳಿಸಿಕೊಟ್ಟ ಮಹಾತ್ಮ ಶ್ರೀ ಬಸವಣ್ಣನವರು ಸಮಾಜ ಸುಧಾರಕರಾಗಿ ಸರ್ವ ಜನಾಂಗದ ಏಳ್ಗೆಗಾಗಿ ಅವರು ನೀಡಿದ ಮಾರ್ಗವನ್ನು ವಚನವನ್ನು ನಾವುಗಳು ಪಾಲಿಸಬೇಕಾಗಿದೆ ಈ ಎಲ್ಲಾ ಹಿನ್ನಲೆಯಲ್ಲಿ ಈ ತಕ್ಷಣ ಸರ್ಕಾರ ಮೇಟ್ರೋ ಯೋಜನೆಗೆ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಾಕ್ಷರಾದ ಡಾ. ಶರಣಪ್ಪ ಎಂ.ಕೊಟಗಿ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯ ಸಂದರ್ಭದಲ್ಲಿ ನಾಗರಾಜ ಕೋಟಗಿ, ಉತ್ತರ ಕರ್ನಾಟಕ ನಾಗರೀಕರ ಸಂಘದ ಅಧ್ಯಕ್ಷರಾದ
ಮುರಿಗೇಶ ಜವಳಿ, ಉತ್ತರ ಕರ್ನಾಟಕ ನಾಗರೀಕರ ಸಂಘದ ಅಧ್ಯಕ್ಷರಾದ ಅಂದಪ್ಪ ಜವಳಿ,  ಎಮ್ ಎಸ್ ಆಯ್ ಎಲ್ ನಿರ್ದೇಶಕರಾದ ಮಹೇಶ ಲಂಬಿ, ಡಾ.ಶಿವಯೋಗಿ ತೆಂಗಿನಕಾಯಿ, ಉಮೇಶಗೌಡ ಪಾಟೀಲ,ಡಾ . ಪ್ರಕಾಶಗೌಡ ಪಾಟೀಲ, ಬಂಗಾರೇಶ ಹಿರೇಮಠ , ರಾಜಶೇಖರ ಮೆಣಸಿಕಾಯಿ, ಉಮೇಶ ಬಣಕಾರ, ಚುಡಾಮನಿ ಹಳ್ಳಿಗಳಿ,
,ರಾಜಶೇಖರ ಕಲ್ಯಾಣಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಯಲ್ಲಿಯೂ ಧಗಧಗನೇ ಉರಿದ ಕಾರ್