Webdunia - Bharat's app for daily news and videos

Install App

ಬರ್ತಡೇ ಗಿಫ್ಟ್‌ ಆಗಿ ಸಿಇಓ ಬಳಿ ಸೆಕ್ಸ್ ಕೇಳಿದ ಎಮ್‌ಡಿ

Webdunia
ಗುರುವಾರ, 18 ಆಗಸ್ಟ್ 2016 (12:36 IST)
ಖಾಸಗಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕನೊಬ್ಬ, ತನ್ನ ಉದ್ಯಮ ಪಾಲುದಾರರೂ, ಕಂಪನಿಯ ಸಿಇಓ ಸಹ ಆಗಿರುವ ಮಹಿಳೆಯ ಬಳಿ ಹುಟ್ಟುಹಬ್ಬದ ಉಡುಗೊರೆಯಾಗಿ ದೈಹಿಕ ಸಂಬಂಧವನ್ನು ಬೆಳೆಸುವಂತೆ ಕೇಳಿಕೊಂಡ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
 
ಬಿಟಿಎಂ ಎರಡನೆಯ ಹಂತದಲ್ಲಿರುವ ಹೆಲ್ತ್‌ಕೇರ್ ಕಂಪನಿಯೊಂದರ ಸಿಇಓ ಆಗಿರುವ ಶಿಲ್ಪಾ( ಹೆಸರು ಬದಲಿಸಲಾಗಿದೆ) ತಮ್ಮ ಕಂಪನಿಯ ಎಮ್‌ಡಿ ಆಗಿರುವ ಬ್ರಿಸ್ ಜಾನ್ ಎಂಬಾತನ ಮೇಲೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಿದ್ದಾಳೆ. 
 
ಜನ್ಮದಿನಕ್ಕೆ ಸೆಕ್ಸ್ ಉಡುಗೊರೆಯಾಗಿ ನೀಡೆಂದ ಜಾನ್ ತನ್ನ ಕೋಣೆಯಲ್ಲಿ ಒಂದು ದಿನ ತಂಗುವಂತೆ ಕೇಳಿದ. ಅಷ್ಟೇ ಅಲ್ಲದೇ ಕಚೇರಿಯಲ್ಲೂ ಮತ್ತು ಲಿಫ್ಟ್‌ನಲ್ಲೂ ನನ್ನ ಜತೆ ಹಲವು ಬಾರಿ ಕೆಟ್ಟದಾಗಿ ವರ್ತಿಸಿದ್ದ ಎಂದು ಪೀಡಿತೆ ದೂರಿನಲ್ಲಿ ತಿಳಿಸಿದ್ದಾಳೆ.
 
ಅಪಾರ ಪ್ರಮಾಣದ ಹಣವನ್ನು ಹೂಡಿ ಕಂಪನಿಯನ್ನು ಪ್ರಾರಂಭಿಸಲಾಗಿತ್ತು. ಕಂಪನಿ ಆರಂಭವಾದಾಗಿನಿಂದ ಜಾನ್ ನನ್ನ ಜತೆ ಆಕ್ಷೇಪಾರ್ಹ ವರ್ತನೆ ತೋರುತ್ತಿದ್ದಾರೆ. ಅಸಭ್ಯವಾಗಿ ಸ್ಪರ್ಶಿಸುತ್ತಾರೆ. ಜುಲೈ 21 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆತ ತನ್ನಲ್ಲಿ ದೈಹಿಕ ಸಂಪರ್ಕ ನಡೆಸುವಂತೆ ಕೇಳಿದ. ಆಗಸ್ಟ್ 1 ರಂದು ಚೆನ್ನೈಗೆ ಟ್ರಿಪ್ ಹೋಗೋಣ ಎಂದು ಆಹ್ವಾನಿಸಿದ್ದ ಎಂದಾಕೆ ಆರೋಪಿಸಿದ್ದಾಳೆ.
 
53ವರ್ಷದ ಜಾನ್ ಮೂಲತಃ ಹೈದರಾಬಾದ್‌ನವನಾಗಿದ್ದು ಶಿಲ್ಪಾಳ ಮಾಜಿ ಸಹೋದ್ಯೋಗಿ ಮತ್ತು ಸ್ನೇಹಿತವಾಗಿದ್ದಾನೆ. ಗಂಡನಿಂದ ದೂರವಾಗಿರುವ ಶಿಲ್ಪಾ ಜಾನ್ ಜತೆ ಸ್ನೇಹವಾದ ಬಳಿಕ ಇಬ್ಬರೂ ಸೇರಿ ಕಂಪನಿಯನ್ನು ಪ್ರಾರಂಭಸಿದರು ಎಂದು ತಿಳಿದು ಬಂದಿದೆ.
 
ಜಾನ್ ಮತ್ತು ಶಿಲ್ಪಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ. ಇತ್ತೀಚಿಗೆ ಅವರ ಸಂಬಂಧ ಹಳಸಿತ್ತು ಎಂದು ಪೊಲೀಸರು ಹೇಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಶಿಲ್ಪಾ ವೈಯಕ್ತಿಕ ಭದ್ರತೆಗಾಗಿ ಜಾನ್ ವಿರುದ್ಧ ದೂರನ್ನಿತ್ತಿದ್ದೇನೆ, ಮತ್ತೇನೂ ಹೇಳ ಬಯಸುವುದಿಲ್ಲ ಎಂದಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ