Publish Date: Sun, 13 Aug 2023 (21:10 IST)
Updated Date: Sun, 13 Aug 2023 (19:33 IST)
ತಪ್ಪು ಮಾಡಿದವರು ಭಯ ಪಡಲಿ ಬಿಜೆಪಿ ಅವರು ಯಾಕೆ ಭಯ ಪಡಬೇಕು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಕೆಜಿ ಹಳ್ಳಿ ಡಿ ಜೆ ಹಳ್ಳಿ ಗಲಭೆ ವಿಚಾರದಲ್ಲಿ ಕ್ಯಾಬಿನೆಟ್ ಉಪ ಸಮಿತಿ ರಚನೆಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಎಂ ಬಿ ಪಾಟೀಲ್ ನಮ್ಮ ಕಾಂಗ್ರೆಸ್ ಪಕ್ಷದ ಸಿದ್ದಾಂತ ಇದೆ.ಅಪರಾಧಿಗಳು ಯಾವುದೇ ಜಾತಿ, ಧರ್ಮದವರೇ ಇರಲಿ.ನಿರಪರಾಧಿಗಳಿಗೆ ತೊಂದರೆ,ಶಿಕ್ಷೆ ಆಗಬಾರದು.ಇದಕ್ಕೆ ಬಿಜೆಪಿ ಅವರು ಭಯ ಪಡುವ ಅವಶ್ಯಕತೆ ಇಲ್ಲ.ತಪ್ಪು ಮಾಡಿದವರು ಭಯ ಪಡಲಿ.ತಪ್ಪು ಮಾಡಿಲ್ಲಾ ಅಂದ್ರೆ ಬಿಜೆಪಿಯವರು ಹೆದರುವುದು ಯಾಕೆ.ನಿರಪರಾಧಿಗಳ ರಕ್ಷಣೆ ಮಾಡಲ್ಲ.ತನಿಖೆ ಆಗುವ ಮೊದಲು ನಿರಪರಾಧಿ, ಅಪರಾಧಿ ಅಂತ ಹೇಳಲಾಗಲ್ಲ. ತನಿಖೆಯಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.ಇನ್ನೂ ಪರಿಷತ್ ನಾಮನಿರ್ದೇಶಿತ ಹೆಸರಗಳ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿ ಸರ್ಕಾರದಿಂದ ರಾಜ್ಯಪಾಲರಿಗೆ ಶಿಪಾರಸ್ಸು ಹೋಗೆ ಇರಲಿಲ್ಲ.ಈಗ ಏನಾಗಿದೆ ಆ ಬಗ್ಗೆ ಮುಖ್ಯ ಮಂತ್ರಿಗಳಿಗೆ ಕೇಳಬೇಕು. ಅಧಿಕೃತವಾಗಿ ಪತ್ರ ಹೋಗದ ಮೇಲೆ ರಾಜ್ಯಪಾಲರು ಸ್ಪಷ್ಟನೆ ಕೇಳಬೇಕು ಹಾಗೂ ಅದರ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು ಎಂದು ಹೇಳಿದರು.