Webdunia - Bharat's app for daily news and videos

Install App

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Webdunia
ಭಾನುವಾರ, 20 ಮಾರ್ಚ್ 2022 (17:28 IST)
ರಾಜಸ್ಥಾನದಲ್ಲಿ  26ವರ್ಷದ ದಲಿತ ಮಹಿಳೆಯನ್ನು ಆಕೆಯ ಮಕ್ಕಳ ಎದುರೇ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಧೋಲ್​​ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಗೆ ಬಂದೂಕಿನ ಗುರಿಯಿಟ್ಟು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಮಹಿಳೆ ಕಾಂಚನ್​​ಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಗಳವಾರ ಸಂಜೆ 6ಗಂಟೆಯ ಹೊತ್ತಿಗೆ ನಾನು ಹೊಲದಿಂದ ನನ್ನ ಪತಿ ಮತ್ತು ಮಕ್ಕಳೊಂದಿಗೆ ವಾಪಸ್ ಹೊರಟಿದ್ದೆ. ಈ ವೇಳೆ ಆರು ಮಂದಿ ನಮ್ಮನ್ನು ತಡೆದರು. ಮೊದಲು ನನ್ನ ಪತಿಗೆ ಹೊಡೆದರು. ಪಿಸ್ತೂಲ್​​ನಿಂದಲೂ ಏಟು ಕೊಟ್ಟರು. ಆತ ತನ್ನ ಜೀವರಕ್ಷಣೆಗಾಗಿ ಓಡಿ ಹೋದ. ನಂತರ ನನಗೂ ಪಿಸ್ತೂಲ್​ ತೋರಿಸಿ ಕೊಲೆ ಮಾಡುವುದಾಗಿ ಹೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇವರೆಲ್ಲ ನಮ್ಮ ಹಳ್ಳಿಯ ಅಕ್ಕಪಕ್ಕದವರೇ ಆಗಿದ್ದಾರೆ ಎಂದೂ ಹೇಳಿದ್ದಾರೆ. 
 
ಲಾಲು, ಧನ್ ಸಿಂಗ್​, ವಿಪಿನ್​ ಮೋಹಿತ್​, ಸಚಿನ್​ ಮತ್ತು ಲೋಕೇಂದ್ರ ಸಿಂಗ್ ಠಾಕೂರ್​ ಎಂಬುವರು ಸೇರಿ ತನ್ನ ಪತಿ ಮತ್ತು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಲಾಲು ಮತ್ತು ಧನ್​ಸಿಂಗ್​ ನನ್ನ ಮೇಲೆ ರೇಪ್​ ಮಾಡಿದ್ದಾರೆ. ಈ ವೇಳೆ ನನ್ನ ತಲೆಗೆ ಬಂದೂಕು ಹಿಡಿಯಲಾಗಿತ್ತು. ಅಲ್ಲೇ ನನ್ನ ಮಕ್ಕಳೂ ಇದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.  ಪ್ರಕರಣದ ಬಗ್ಗೆ ಧೋಲ್​​ಪುರ ವೃತ್ತ ನಿರೀಕ್ಷಕ ಅಧಿಕಾರಿ ವಿಜಯ್​ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬರಬೇಕು. ನಂತರ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.ಸದ್ಯ ಮಹಿಳೆ ಆರೋಪ ಮಾಡಿದವರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಇದು ಭೂಮಿ ವಿವಾದದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಎಂಬ ಬಲವಾದ ಅನುಮಾನವಿದೆ. ಈ ಮಹಿಳೆಯ ಪತಿ ಮತ್ತು ಆರೋಪಿಗಳ ಮಧ್ಯೆ ಜಮೀನು ವಿಚಾರಕ್ಕೆ ಗಲಾಟೆ ನಡೆದಿತ್ತು. ಅದೇ ಸಿಟ್ಟಿನಲ್ಲಿ ಆರೋಪಿಗಳು ಮಹಿಳೆಯನ್ನು ಟಾರ್ಗೆಟ್​ ಮಾಡಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ವಿಸ್ತೃತ ತನಿಖೆಯಾದ ವಿನಃ ಸ್ಪಷ್ಟವಾಗಿ ಹೇಳಲಾಗದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments