Publish Date: Thu, 30 Sep 2021 (20:05 IST)
Updated Date: Thu, 30 Sep 2021 (20:10 IST)
ಪಂಚಮಸಾಲಿ ಲಿಂಗಾಯತ ಸಮುದಾಯ ನಡೆಸ್ತಾ ಇದ್ದ ಪ್ರತಿಭಟನೆಯನ್ನ ಸರ್ಕಾರದ ಭರವಸೆ ಹಿನ್ನಲೆ ಕೈ ಬಿಡಲಾಗಿತ್ತು.ಸರ್ಕಾರ ನೀಡಿದ ಭರವಸೆಯನ್ನ ಮರೆತಂತೆ ಕಾಣುತ್ತಿದ್ದು ಜನಾಂಗಕ್ಕೆ ಸೂಕ್ತ ನ್ಯಾಯ ದೊರಕುವವರೆಗೂ ಹೊರಾಟ ಮಾಡುವುದಾಗಿ ಪಂಚಮಸಾಲಿ ಫಿಠದ ಜಯಮೃತ್ಯುಂಜಯ ಸ್ವಾಮಿಜಿ ಹೇಳಿದ್ದಾರೆ.ಪಂಚಮಸಾಲಿಗಳಿಗೆ ಮೀಸಲಾತಿ ಪಡೆಯಲು ಅನೇಕ ಹೊರಾಟ ಮಾಡಲಾಗಿದ್ದು ಅಕ್ಟೋಬರ್ 1 ಕ್ಕೆ ಈ ಅಭಿಯಾನ ಮುಕ್ತಾಯಗೊಳ್ಳಲಿದೆ.ಅಂದು ಸರ್ಕಾರ ಸ್ಪಷ್ಟ ಭರವಸೆಯನ್ನು ನೀಡಬೇಕು ಇಲ್ಲವಾದಲ್ಲಿ ಅಕ್ಟೋಬರ್ ಒಂದರಿಂದ ಮತ್ತೆ ನಾವು ಹೋರಾಟವನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.ಇನ್ನು ಮುಖ್ಯಮಂತ್ರಿಗಳು ಕೂಡ ಮೀಸಲಾತಿ ಕೋಡಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ.ಹೀಗಾಗಿ ಮುಖ್ಯಮಂತ್ರಿಗಳ ಮೇಲೆ ನಮಗೆ ಭರವಸೆ ಇದ್ದು.ವರದಿಯನ್ನ ಕೂಡಲೇ ಸಂಪುಟದಲ್ಲಿ ಪಾಸ್ ಮಾಡ್ಬೇಕು ಎಂದು ಆಗ್ರಹಿಸಿದ್ದಾರೆ..