ಉತ್ತರ ಕರ್ನಾಟಕದಲ್ಲಿ ನಿರ್ಮಾಣ ಹಂತದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಶಾಖಾ ಮಠದ ಕಟ್ಟಡವನ್ನ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಶ್ರೀಗಳು ವೀಕ್ಷಣೆ ಮಾಡಿದರು.
ಭಕ್ತರ ಆಶಯದಂತೆ ರಾಘವೇಂದ್ರ ಸ್ವಾಮಿಗಳ ಮೂಲ ವೃತ್ತಿಕಾ ಬೃಂದಾವನ ನಿರ್ಮಾಣ ಕಾರ್ಯ ಗದಗನಲ್ಲಿ ನಡೆಯುತ್ತಿದೆ. ಮೂಲ ಗುರುಗಳ ಆಶಯದಂತೆ ಎಲ್ಲ ಜನಾಂಗದ ಭಕ್ತರು ಭಾಗಿಯಾಗಿ ಶಾಖಾ ಮಠದ ಕಟ್ಟಡಕ್ಕೆ 40 ಲಕ್ಷ ರೂಪಾಯಿ ಖರ್ಚುಮಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಸುಮಾರು 60/80 ಅಡಿ ವಿಸ್ತಾರ ಪ್ರದೇಶದಲ್ಲಿ ಗರ್ಭಗುಡಿ, ಪೂಜಾ ಕೋಣೆ, ಭೋಜನ ಶಾಲೆ, ಸಭಾಂಗಣ ಸಹಿತ ಅನೇಕ ಕಾಮಗಾರಿಗಳು ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿಯನ್ನು ಭಕ್ತರ ಆಶಯದಂತೆ ಶಾಖಾ ಮಠದ ಮುಂದಿನ ಜವಾಬ್ದಾರಿಯನ್ನು ಮಂತ್ರಾಲಯದ ಮಠ ವಹಿಸಿಕೊಳ್ಳಲಿದೆ.
ಶೀಘ್ರವೇ ತಜ್ಞರನ್ನು ಕಳುಹಿಸಿ, ಕಟ್ಟಡದ ಮುಂದಿನ ಹಂತದ ನೀಲನಕ್ಷೆ ಸಿದ್ಧಪಡಿಸಿ, ಭಕ್ತರ ಜೊತೆ ಚರ್ಚಿಸಿ ಶಾಖಾ ಮಠದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಆದಷ್ಟು ಬೇಗ ಗುರುರಾಯರ ಅನುಗೃಹ ಗದಗ ಜಿಲ್ಲೆಯ ಭಕ್ತರಿಗೆ ದೊರೆಯಲಿದೆ ಎಂದು ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಈ ಸಂದರ್ಭದಲ್ಲಿ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದ ಕಟ್ಟಡ ನಿರ್ಮಾಣ ಸಮಿತಿ ಸದಸ್ಯರು ಶಾಖಾ ಮಠವನ್ನು ಅಧಿಕೃತವಾಗಿ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಹಸ್ತಾಂತರಿಸಿದರು.