Select Your Language

Notifications

webdunia
webdunia
webdunia
webdunia

Mangaluru Suhas Shetty murder: ಸುಹಾಸ್ ಶೆಟ್ಟಿ 50 ಲಕ್ಷ ರೂ ಫಂಡಿಂಗ್ ಬಂತು: ಮುಸ್ಲಿಂ ಮುಖಂಡರ ಮೇಲೆಯೇ ಡೌಟ್

Mangaluru Suhas Shetty

Krishnaveni K

ಮಂಗಳೂರು , ಸೋಮವಾರ, 5 ಮೇ 2025 (09:28 IST)
ಮಂಗಳೂರು: ಕಡನಗರಿ ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಹೊರಬೀಳುತ್ತಿವೆ. ಮೂಲಗಳ ಪ್ರಕಾರ ಸುಹಾಸ್ ಹತ್ಯೆಗೆ 50 ಲಕ್ಷ ರೂ. ಫಂಡಿಂಗ್ ಮಾಡಲಾಗಿದ್ದು, ಇದೀಗ ಪ್ರಮುಖ ಮುಸ್ಲಿಂ ಮುಖಂಡರ ಮೇಲೆಯೇ ಅನುಮಾನ ಮೂಡಿದೆ.

ಸುಹಾಸ್ ಶೆಟ್ಟಿ ಹತ್ಯೆಗೆ 5 ಲಕ್ಷ ರೂ. ಸುಪಾರಿ ನೀಡಲಾಗಿತ್ತು ಎಂದು ಈ ಮೊದಲು ಪೊಲೀಸರು ಹೇಳಿದ್ದರು. ಆದರೆ ಇದೀಗ ತನಿಖೆ ನಡೆಸುತ್ತಿದ್ದಂತೇ ಕೇವಲ 5 ಲಕ್ಷ ರೂ. ಅಲ್ಲ, 50 ಲಕ್ಷ ರೂ. ಹಣ ಹರಿದಾಡಿದೆ ಎಂಬ ಸುಳಿವು ಸಿಕ್ಕಿದೆ.

ಫಾಝಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. ಆರೋಪಿಗಳಿಗೆ 3 ಲಕ್ಷ ರೂ. ಮುಂಗಡ ಹಣ ನೀಡಿಯಾಗಿತ್ತು. ಆದರೆ ಸುಹಾಸ್ ಹತ್ಯೆ ನಡೆಸಲು ಪಣ ತೊಟ್ಟಿದ್ದ ಮುಸ್ಲಿಮರು 50 ಲಕ್ಷ ರೂ. ಫಂಡಿಂಗ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿಯೇ ಇಷ್ಟೊಂದು ಹಣ ಸಹಾಯ ಮಾಡಿದ ಮುಖಂಡರು ಯಾರು ಎಂಬ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಪ್ರಭಾವೀ ವ್ಯಕ್ತಿಗಳೇ ಸಹಾಯ ಮಾಡಿರಬಹುದು ಎಂಬ ಸಂಶಯವಿದೆ. ಸುಹಾಸ್ ಹತ್ಯೆಗೆ ಒಂದು ಮೀನಿನ ಟೆಂಪೊ, ಸ್ವಿಫ್ಟ್ ಕಾರು ಬಳಸಲಾಗಿತ್ತು. ಅಲ್ಲದೆ ಆರೋಪಿಗಳಿಗೆ 5 ಲಕ್ಷ ರೂ. ನೀಡುವುದಾಗಿ ಸುಪಾರಿ ನೀಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

India Pakistan: ಭಾರತೀಯ ಸೇನೆಗೆ ಸಿಕ್ತು ಹೊಸ ಆಯುಧ, ಏನಿದರ ವಿಶೇಷತೆ