ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇನ್ಮುಂದೆ ರಾಜ್ಯಸಭೆ ಸದಸ್ಯರಾಗಲಿದ್ದಾರೆ.
ಹೀಗೊಂದು ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಲಾರಂಭಿಸಿದೆ. ಜೂನ್ ನಲ್ಲಿ ಕಾಂಗ್ರೆಸ್ ನ ಇಬ್ಬರು, ಬಿಜೆಪಿಯ ಹಾಗೂ ಜೆಡಿಎಸ್ ನ ತಲಾ ಒಬ್ಬ ರಾಜ್ಯ ಸಭಾ ಸದಸ್ಯರ ಅವಧಿ ಪೂರ್ಣಗೊಳ್ಳಲಿದೆ.
ಹಿರಿಯ ನಾಯಕರಾಗಿರೋ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ. ಜೆಡಿಎಸ್ ನಿಂದ ಹೆಚ್.ಡಿ.ದೇವೇಗೌಡರು ಆಯ್ಕೆಯಾಗೋದು ಬಹುತೇಕ ಖಚಿತವಾದಂತಿದೆ.
ರಾಜ್ಯಸಭೆಗೆ ಆಯ್ಕೆ ಮಾಡೋ ವಿಷಯ ಹೈಕಮಾಂಡ್ ಗೆ ಬಿಟ್ಟಿ ವಿಷಯ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದಲ್ಲಿ ಅಧಿಕಾರ ಕೊಡಿ ಅಂತ ಎಲ್ಲೂ ಕೇಳಿಲ್ಲ ಅಂತ ಖರ್ಗೆ ಹೇಳಿದ್ದಾರೆ.