Publish Date: Mon, 30 Jun 2025 (16:00 IST)
Updated Date: Mon, 30 Jun 2025 (16:02 IST)
ಬೆಂಗಳೂರು: ಕರ್ನಾಕಟದ ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯಗಳ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸುತ್ತಾ ಎಲ್ಲಾ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದಿದ್ದರು. ಅವರ ಹೇಳಿಕೆ ಈಗ ಫುಲ್ ಟ್ರೋಲ್ ಆಗಿದೆ.
ಕರ್ನಾಟಕ ಕಾಂಗ್ರೆಸ್ ನಲ್ಲಿ ಈಗ ಕೆಲವರಿಗೆ ಅನುದಾನದ ಬಗ್ಗೆ ಅಸಮಾಧಾನವಾದರೆ ಮತ್ತೆ ಕೆಲವರಿಗೆ ಸಿಎಂ ಕುರ್ಚಿ ಬದಲಾವಣೆ ಬಗ್ಗೆ ಹೇಳಿಕೆ ನೀಡುವ ಚಪಲ. ಇದರಿಂದಾಗಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬೀದಿಗೆ ಬಂದಿದೆ.
ಇದರ ಬಗ್ಗೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿರುವ ಖರ್ಗೆ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಿಮಗೆ ಊಹೆಯೂ ಮಾಡಲು ಸಾಧ್ಯವಾಗಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆದರೆ ಖರ್ಗೆಯೇ ಎಐಸಿಸಿ ಅಧ್ಯಕ್ಷ ಎಂಬ ಕಾಂಗ್ರೆಸ್ ನ ಉನ್ನತ ಪಟ್ಟದಲ್ಲಿದ್ದಾರೆ. ಹೀಗಿರುವಾಗ ಇನ್ನು ಹೈಕಮಾಂಡ್ ಎಂದು ಬೇರೆಯವರನ್ನು ಹೇಳುತ್ತಾರೆ ಎಂದು ಅವರಿಗೆ ಪಕ್ಷದಲ್ಲಿ ಎಂಥಾ ಸ್ಥಾನವಿದೆ ಎಂದು ಗೊತ್ತಾಗುತ್ತಿದೆ ಎಂದು ಹಲವರು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಇದರಿಂದಲೇ ಖರ್ಗೆ ಸಾಹೇಬ್ರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕೈಗೊಂಬೆ ಎಂಬುದು ಸ್ಪಷ್ಟವಾಯಿತು ಬಿಡಿ ಎಂದು ಕಾಲೆಳೆದಿದ್ದಾರೆ.
Krishnaveni K
Publish Date: Mon, 30 Jun 2025 (16:00 IST)
Updated Date: Mon, 30 Jun 2025 (16:02 IST)