Select Your Language

Notifications

webdunia
webdunia
webdunia
webdunia

ಮುಸ್ಲಿಮರಿಗೆ ಮಾತ್ರ ಹೆಚ್ಚು ಮಕ್ಕಳಲ್ಲ, ನನಗೂ 5 ಮಕ್ಕಳಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Mallikarjun Kharge

Krishnaveni K

ಬೆಂಗಳೂರು , ಬುಧವಾರ, 1 ಮೇ 2024 (12:19 IST)
ಬೆಂಗಳೂರು: ಮುಸ್ಲಿಮರು ಬಹು ಮಕ್ಕಳನ್ನು ಹೊಂದಿರುವವರು ಎಂದು ಟೀಕಿಸಿದ್ದ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಸ್ಲಿಮರು ಮಾತ್ರವಲ್ಲ, ನನಗೂ 5 ಮಕ್ಕಳಿದ್ದಾರೆ ಎಂದಿದ್ದಾರೆ.

ಬಡ ಕುಟುಂಬದವರು ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ. ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ ಎಂದು ಮೋದಿ ಟೀಕೆಗೆ ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ ಮುಸ್ಲಿಮರಿಗೆ ಮಾತ್ರವಲ್ಲ, ನನಗೂ ಐವರು ಮಕ್ಕಳಿದ್ದಾರೆ ಎಂದಿದ್ದಾರೆ. ಇದೆಲ್ಲಾ ಸೋಲಿನ ಭಯದಿಂದ ಮೋದಿ ಮಾಡುತ್ತಿರುವ ಆರೋಪಗಳು ಎಂದಿದ್ದಾರೆ.

ಮೋದಿಗೆ ಈಗ ಕಾಂಗ್ರೆಸ್ ಬಹುಮತದತ್ತ ಸಾಗುತ್ತಿದೆ ಎಂದು ಅರಿವಾಗಿದೆ. ಅದೇ ಕಾರಣಕ್ಕೆ ಅವರು ಮುಸ್ಲಿಮರು, ಮಂಗಳಸೂತ್ರ ಎಂದೆಲ್ಲಾ ತಲೆಬುಡವಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಿಮ್ಮ ಆಸ್ತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಹಂಚಲಿದೆ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

‘ಕೇವಲ ಮುಸ್ಲಿಮರಿಗೆ ಮಾತ್ರ ಹೆಚ್ಚು ಮಕ್ಕಳಿದ್ದಾರೆಯೇ? ನನಗೂ ಐವರು ಮಕ್ಕಳಿದ್ದಾರೆ. ನಾನು ನಮ್ಮ ಮನೆಗೆ ಒಬ್ಬನೇ ಮಗನಾಗಿದ್ದೆ. ನನ್ನ ಮನೆ ಬೆಂಕಿಗೆ ಆಹುತಿಯಾಗಿತ್ತು. ಬದುಕುಳಿದಿದ್ದ ತಂದೆ ನಿನ್ನ ಮಕ್ಕಳನ್ನು ನೋಡಲೆಂದೇ ನಾನು ಬದುಕಿದ್ದೇನೆ ಎಂದಿದ್ದರು. ಬಡವರಿಗೆ ಹೆಚ್ಚು ಹಣವಿರಲ್ಲ, ಆದರೆ ಮಕ್ಕಳಿರುತ್ತಾರೆ. ಆದರೆ ಮೋದಿ ಯಾಕೆ ಮುಸ್ಲಿಮರಿಗೇ ಹೆಚ್ಚು ಮಕ್ಕಳಿರುವವರು ಎನ್ನುತ್ತಾರೆ? ಮುಸ್ಲಿಮರೂ ಈ ದೇಶದವರೇ. ನಾವು ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶ ಮುನ್ನಡೆಸಬೇಕು. ಬಿಜೆಪಿಯಂತೆ ನಾವು ದೇಶ ಒಡೆಯುವ ಕೆಲಸ ಮಾಡಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನನ್ನು ಸಂಕಷ್ಟದಿಂದ ಪಾರು ಮಾಡಲು ಹೋಮ ಮಾಡಿದ ಎಚ್ ಡಿ ರೇವಣ್ಣ




X
X
X
X