ಬೆಂಗಳೂರು : ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಹದೇವಪ್ಪ ಇದೀಗ ಟ್ವೀಟರ್ ನಲ್ಲಿ ಹಿಂದ ಹೋರಾಟದ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ನಾನು ಮತ್ತು ಸಿದ್ದರಾಮಯ್ಯ 1989ರಿಂದಲೂ ಆತ್ಮೀಯರು ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಕೇವಲ ಅಂತೆಕಂತೆ ಅಷ್ಟೇ. ಪ್ರಜಾಪ್ರಭುತ್ವಕ್ಕೆ ಅಪಾಯದ ಸಮಯ ಬಂದಾಗಲೆಲ್ಲಾ ನಾವು ಹೋರಾಟ ಮಾಡಿದ್ದೇವೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಹೋರಾಟ ಸೃಷ್ಟಿಯಾಗುತ್ತೆ. ಅಂತಹ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಇದೀಗ ದೇಶದಲ್ಲಿ ಸಂವಿಧಾನಾತ್ಮಕ ವಾತಾವರಣವೇ ಕೆಡುತ್ತಿರುವುದರಿಂದ ಜನಪರ ಧ್ವನಿಗಳೇ ರಾಜಕೀಯ ವಲಯದಲ್ಲಿ ಕ್ಷೀಣಿಸುತ್ತಿರುವುದರಿಂದ ನಾನು ಮತ್ತು ಸಿದ್ದರಾಮಯ್ಯ ನವರು ಹೋರಾಟಗಳನ್ನು ಸಂಘಟಿಸುವ ಮತ್ತು ಸಾಮಾಜಿಕ ನ್ಯಾಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ನಿರ್ಧರಿಸಿದ್ದೇವೆ ಎಂದು ಹೇಳುವ ಮೂಲಕ ಹಿಂದ ಹೋರಾಟದ ಸುಳಿವು ನೀಡಿದ್ದಾರೆ.