ಬೆಂಗಳೂರು : ನಮ್ಮ ದೇಹದ ಭಾರ ನಮ್ಮ ಪಾದಗಳ ಮೇಲೆ ಬೀಳುತ್ತದೆ. ಮತ್ತು ಯಾವಾಗಲೂ ಬೂಟುಗಳನನ್ನು ಧರಿಸುವುದರಿಂದ ನೋವಿನಿಂದ ಕಾಲಿನಲ್ಲಿ ದೊಡ್ಡದಾದ ಗುಳ್ಳೆ ಕಾಣಿಸುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
¼ ಕಪ್ ಎಪ್ಸಂ ಉಪ್ಪನ್ನು ಬೆಚ್ಚಗಿರುವ ನೀರಿಗೆ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ ನೆನೆಸಿಡಿ. ಇದನ್ನು ದಿನಕ್ಕೆ 2 ಬಾರಿ ಮಾಡಿ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.
½ ಕಪ್ ವಿನೆಗರ್ ನ್ನು 1 ಬಕೆಟ್ ನೀರಿಗೆ ಹಾಕಿ 15 ನಿಮಿಷಗಳ ಕಾಲ ನೆನೆಸಿಡಿ. ಇದನ್ನು ದಿನಕ್ಕೆ 2 ಬಾರಿ ಮಾಡಿ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ವಿನೆಗರ್ ಉರಿಯೂತದ ಗುಣಗಳನ್ನು ಹೊಂದಿರುವುದರಿಂದ ಇದರಿಂದ ಪಾದದ ಊತ ಮತ್ತು ಗುಳ್ಳೆ ಕಡಿಮೆಯಾಗುತ್ತದೆ.