Publish Date: Sunday, 18 September 2022 (15:24 IST)
Updated Date: Sunday, 18 September 2022 (17:30 IST)
ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಅಂತರ ಗಂಗೆಯ ಸುತ್ತ ಮುತ್ತಲೆಲ್ಲಾ ಬೆಟ್ಟ ಗುಡ್ಡಳಿಂದ ಹರಿಯುತ್ತಿರುವ ನೀರು ಸುಂದರ ಜಲಪಾತದಂತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಪ್ರವಾಸಿಗರಿಗೆ ಹಾಗೂ ದೇವಾಲಯಕ್ಕೆ ಬರುವ ಭಕ್ತ ಸಮೂಹಕ್ಕೆ ಕುಟುಂಬ ಸಮೇತ ಯಾಕಾಗಿ ಇಲ್ಲಿಗೆ ಬಂದೆವೋ ಎಂಬುವಷ್ಟು ಅಸಹ್ಯಕರ ವಾತಾವರಣ ಅಲ್ಲೀಗ ನಿರ್ಮಾಣಗೊಂಡಿದೆ.
ಜೊತೆಗೆ ಪ್ರೇಮಿಗಳ ಹಿಂದೆ ಬೀಳುವ ಪುಂಡ ಪೋಕರಿಗಳ ಪಡೆ ಬೇರೆ.ಹುಡುಗರು ತಮ್ಮ ಬ್ಯಾಗುಗಳಲ್ಲಿ ಹೊತ್ತು ತರುವ ಪುಸ್ತಕಗಳ ಜೊತೆಗೆ ಗುಟ್ಕಾ-ಪಾನ್ ಪರಾಗ್ ಹನ್ಸ್ ಸೇರಿದಂತೆ ತಂಬಾಕು ಪದಾರ್ಥಗಳನ್ನು ಕೂಡ ತಂದು ಅದನ್ನು ಸೇವಿಸಿ,ಅವುಗಳ ಪಾಕೆಟ್ ಗಳನ್ನು ಇಲ್ಲಿಗೆ ಎಸೆಯುತ್ತಿರುವುದು ಕೂಡ ಕಂಡು ಬಂದಿದೆ.
ಅರಣ್ಯ ಇಲಾಖೆ ತನ್ನ ಕರ್ತವ್ಯ ಮರೆತರೇ,ಪೊಲೀಸ್ ಇಲಾಖೆ ಇದೊಂದು ಔಟ್ ಪೋಸ್ಟ್ ಮುಚ್ಚಿಕೊಂಡು ಮೂರಾಬಟ್ಟೆ ಮಾಡಿಕೊಂಡು ಠಾಣೆಯಲ್ಲೇ ಭರ್ಜರಿ ನಿದ್ದೆಗೆ ಜಾರಿದೆ.