Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದ ಪ್ರೀತಿ ಇನ್ನೇನು ಮದುವೆಯಾಗಬೇಕು ಎನ್ನುವಾಗ ಪ್ರಿಯಕರ ಕೈಕೊಟ್ಟು ಪರಾರಿಯಾಗಿದ್ದಾನೆ.
ಬೆಂಗಳೂರಿನ ಯುವಕ ಮತ್ತು ತುಮಕೂರಿನ ಯುವತಿ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಜೊತೆ ಬೇಜಾನ್ ಓಡಾಡಿದ್ದ ಯುವಕ ಇದೀಗ ಮದುವೆ ಟೈಂನಲ್ಲಿ ಕೈಕೊಟ್ಟಿದ್ದಾನೆ.
ಪೀಣ್ಯಾದ ದೇವಾಲಯವೊಂದರಲ್ಲಿ ಮದುವೆಯಾಗಲು ಎಲ್ಲವೂ ಸಿದ್ಧತೆಯಾಗಿತ್ತು. ಆದರೆ ದಾರಿ ಮಧ‍್ಯದಲ್ಲೇ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಇದೀಗ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.