ಬಿಜೆಪಿ ಆಡಳಿತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಭ್ರಷ್ಟಾಚಾರದ ಕೂಪವಾಗಿರುವುದನ್ನು ಇತ್ತೀಚೆಗೆ ನಡೆದ ಎಸಿಬಿ ದಾಳಿಯಿಂದ ಜಗಜ್ಜಾಹೀರಾಗಿದೆ. ಬಡಾವಣೆ ಅಭಿವೃದ್ಧಿಗೆ ಹಣವಿಲ್ಲವೆಂದು ಮೂಲಸೌಕರ್ಯವಿಲ್ಲದ ನಿವೇಶನ ಹರಾಜಿಗೆ ಮುಂದಾಗಿರುವುದು ನಷ್ಟಕ್ಕೆ ದಾರಿ ಮಾಡಿಕೊಡುತ್ತಿದೆ.ಟೆಂಡರ್ ಅನುಮೋದನೆಗೆ, ಬಿಲ್ ಪಾವತಿಗೆ, ಕಾಮಗಾರಿ ಆರಂಭಕ್ಕೆ, ಮೇಲಿನವರಿಂದ ಕೆಳಗಿನವರವರೆಗೂ, ಸಂಸದರು, ಶಾಸಕರಿಂದ ಹಿಡಿದು ಅಧಿಕಾರಿಗಳವರೆಗೂ ಪ್ರತಿ ಹಂತದಲ್ಲೂ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ವಸೂಲಿ ಮಾಡುತ್ತ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರಕಾರ ಇರುವವರೆಗೂ ರಾಜ್ಯದ ಅಭಿವೃದ್ಧಿ ಅಸಾಧ್ಯ' ಎಂದು ಕಾಂಗ್ರೆಸ್ ಟೀಕಿಸಿದೆ.
'ಈಗಾಗಲೇ ದುಬಾರಿ ವೆಚ್ಚದಲ್ಲಿ ನಿರ್ಮಿಸಿದ ಬೆಂಗಳೂರಿನ ರಸ್ತೆಗಳನ್ನು ಕಾರಿಡಾರ್‌ಗಳನ್ನಾಗಿಸಲು ಸರ್ಕಾರ ಮುಂದಾಗಿರುವುದು ಅನಗತ್ಯ ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ. ಅಗತ್ಯವಿರುವ ಯೋಜನೆಗಳಿಗೆ ಸಂಪನ್ಮೂಲದ ಕೊರತೆಯ ಸಬೂಬು ಹೇಳುವ ಸರ್ಕಾರ ಇಂತಹ ಅನಗತ್ಯ ಯೋಜನೆಗೆ ಕೈ ಹಾಕಿರುವುದು 40% ಕಮಿಷನ್‌ಗಾಗಿಯೇ?' ಎಂದು ಪ್ರಶ್ನಿಸಿದೆ.