Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಲಾಕಪ್ ಡೆತ್​..?

Webdunia
ಗುರುವಾರ, 5 ಜನವರಿ 2023 (19:32 IST)
ದರೋಡೆಗೆ ಸಂಚು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಆ ಯುವಕನ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ಓಡಾಡ್ತಿದ್ದ ಆತನನ್ನು ನಿನ್ನೆ ಸಂಜೆ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ರು. ಇನ್ನೇನು ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆದರೆ ಮುಂಜಾನೆ ಹೊತ್ತಿಗೆ ಪೊಲೀಸ್ ಠಾಣೆಯಲ್ಲೇ ಆತ ಸಾವನ್ನಪ್ಪಿದ್ದಾನೆ.
ಈ ಪೋಟೋದಲ್ಲಿರುವ ಈ ಯುವಕನ ಹೆಸರು ವಿನೋದ್‌... 23 ವರ್ಷದ ಈತ ನಗರದ ಕಾಟನ್ ಪೇಟೆಯ ಜಾಲಿ ಮೊಹಲ್ಲಾ ನಿವಾಸಿ. 2017ರಲ್ಲಿ 19 ವರ್ಷದವನಿರುವಾಗಲೇ ವಿನೋದ್ ದರೋಡೆಗೆ ಸಂಚು ಹೂಡಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದವನು ಜಾಮೀನು ಪಡೆದು ಹೊರಬಂದ ನಂತ್ರ ಮತ್ತೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ವಿನೋದ್​ ವಿರುದ್ಧ ಮೂರು ಬಾರಿ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಪೊಲೀಸ್ರು ವಿನೋದ್​ಗಾಗಿ ಹುಡುಕಾಟ ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ವಿನೋದ್ ಏರಿಯಾದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಅಲ್ಲಿಗೆ ಹೋದ ಕಾಟನ್ ಪೇಟೆ ಪೊಲೀಸರು, ವಿನೋದ್​ನನ್ನ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ರು. ರಾತ್ರಿ ಏಳು ಗಂಟೆ ವೇಳೆ ಸೆಲ್​ನಲ್ಲಿ ಹಾಕಲಾಗಿತ್ತು. ಹೀಗೆ ಸೆಲ್​ನಲ್ಲಿರುವ ಆರೋಪಿಗಳನ್ನ 1 ಅಥವಾ 2 ಗಂಟೆಗೊಮ್ಮೆ ಎಬ್ಬಿಸಿ ಚೆಕ್​ ಮಾಡೋದು ಸಾಮಾನ್ಯ ಪ್ರಕ್ರಿಯೆ. ಅಂತೆಯೇ ಇಂದು ಮುಂಜಾನೆ 3:45ರ ಸುಮಾರಿಗೆ ಆರೋಪಿ ವಿನೋದ್​ನನ್ನ ಎಬ್ಬಿಸಿದಾಗ ಆತ ಪ್ರಜ್ಞೆ ಹೀನಾ ಸ್ಥಿತಿಯಲ್ಲಿರೋದು ಗೊತ್ತಾಗುತ್ತೆ.  ಕೂಡಲೇ ವಿನೋದ್​ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚೆಕ್ ಮಾಡಿದ ವೈದ್ಯರು, ಆರೋಪಿ ವಿನೋದ್ ಈಗಾಗಲೇ ಸಾವನ್ನಪ್ಪಿದ್ದಾನೆ ಅಂತ ಖಚಿತಪಡಿಸಿದ್ರು. 
ವಿನೋದ್​ ಸಾವಿನ ವಿಚಾರ ತಿಳಿದ ಮೇಲಾಧಿಕಾರಿಗಳು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಪೊಲೀಸ್ರ ವಶದಲ್ಲಿರುವಾಗಲೇ ವಿನೋದ್​ ಸಾವನ್ನಪ್ಪಿರುವ ಹಿನ್ನೆಲೆ CRPC 176ರ ಅಡಿಯಲ್ಲಿ ಲಾಜಕಪ್​ ಡೆತ್​ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಮುಂದಿನ ತನಿಖೆಗಾಗಿ ಪ್ರಕರಣವನ್ನ‌ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇನ್ನ ಈ ವಿಚಾರ ತಿಳಿದ ಸಂಬಂಧಿಕರು, ಪೊಲೀಸ್ ಠಾಣೆ ಎದುರು ಜಮಾಯಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿನೋದ್​ಗೆ ನಿನ್ನೆ ಹುಷಾರಿರಲಿಲ್ಲ. ಅಲ್ಲದೆ ಕುಡಿದಿದ್ದ. ಅಂತಹ ಪರಿಸ್ಥಿತಿಯಲ್ಲೂ ಆತನನ್ನ ಕರೆದುಕೊಂಡು ಬಂದಿದ್ದಾರೆ. ವಿನೋದ್ ಸಾವು ಸಹಜವಲ್ಲ. ಅದು ಅಸಹಜ ಸಾವಾಗಿದೆ. ವಿನೋದ್​ ತಲೆ ಪೆಟ್ಟಾಗಿದೆ. ಪೊಲೀಸರ ಏನೋ‌ ಮಾಡಿದ್ದಾರೆ ಎಂದು ವಿನೋದ್ ಸ್ನೇಹಿತರು ಆರೋಪಿಸಿದ್ದಾರೆ.ದ್ಯ ಈ ಪ್ರಕರಣದ ತನಿಖೆಯನ್ನ ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ. ಅಲ್ಲದೆ  
ಮ್ಯಾಜಿಸ್ಟ್ರೇಟ್​ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಅದರ ವಿಡಿಯೋ ಸಹ ಮಾಡಲಾಗುವುದು. ಇನ್ನು ವಿನೋದ್​ ಸಾವಿಗೆ ಕಾರಣ ಏನು ಅನ್ನೋದು ಪೋಸ್ಟ್ ಮಾರ್ಟಂ ರಿಪೋರ್ಟ್ ನಂತರವಷ್ಟೇ ತಿಳಿಬೇಕಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments