ಬೆಂಗಳೂರಿನಲ್ಲಿ ಇತ್ತೀಚೆಗೆ ನೇಪಾಳಿ ಮೂಲದವರನ್ನ ಸೆಕ್ಯೂರಿಟಿಗಳಾವಿ ನೇಮಕ ಮಾಡ್ಕೊಳ್ಳೋರ ಸಂಖ್ಯೆ ಜಾಸ್ತಿನೇ ಅಗಿದೆ.ಕಡಿಮೆ ಸಂಬಂಳ ಅಂತಾ ನೇಮಕ ಮಾಡ್ಕೊಳ್ತಾರೆ. ಪೊಲೀಸರು ಎಷ್ಟೇ ಬಾರಿ ಎಚ್ಚರಿಕೆ ಕೊಟ್ರೂ ನೋ ಯೂಸ್.ಅದೇ ಕೆಲಸ ಮುಂದುವರಿಸುತ್ತಿದ್ದಾರೆ. ಇದೀಗ ನಗರದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು.ಮನೆಯ ಕಾವಲಾಗಿದ್ದ ನೇಪಾಳ ಮೂಲದ ದಂಪತಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಣ,ಚಿನ್ನಾಭರಣ ಕದ್ದು ಪರಾರಿ ಆಗಿದ್ದಾರೆ.ಇಷ್ಟುಕ್ಕೂ ಈ ರಾಬರಿ ಮಾಡಿದ್ದು ಬೇರೆ ಯಾರೋ ಅಲ್ಲ, ಜಾಲಹಳ್ಳಿ ಶಾರದಾಂಬನಗರದ 4 ನೇ ಕ್ರಾಸ್ ನಲ್ಲಿರೊ ಗೋಲ್ಡನ್ ಬೆಲ್ ಅಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಇದೇ ಶಿವರಾಜ್ ಮತ್ತು ಜಯಂತಿ ದಂಪತಿ.ಶಿವರಾಜ್ ಅಪಾರ್ಟ್ ಮೆಂಟ್ ನಲ್ಲಿ 6 ವರ್ಷದಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ರೆ , ಜಯಂತಿ ಅಪಾರ್ಟ್ ಮೆಂಟ್ ನ ಕೆಲವು ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ಳು.ಉಳಿದುಕೊಳ್ಳಲು ಒಂದು ರೂಂ ಕೂಡ ನೀಡಲಾಗಿತ್ತು.ಜಯಂತಿ ಅಪಾರ್ಟ್ ಮೆಂಟ್ ನ ಮೊದಲ ಮಹಡಿಯಲ್ಲಿರುವ ನರೇಶ್ ಎಂಬುವರ ಫ್ಲಾಟ್ ನಲ್ಲಿಯೂ ಕೆಲಸಕ್ಕೆ ಹೋಗ್ತಿದ್ಳು ಆ ವೇಳೆ ಕೀ ತೆಗೆದು ಡೂಪ್ಲಿಕೇಟ್ ಕೀ ಮಾಡಿಸಿಕೊಂಡಿದ್ದಾರೆ.ಮನೆಯವರು ಇಲ್ಲದಿದ್ದ ಸಮಯ ನೋಡಿ.ಅದೇ ಕೀ ಬಳಸಿ ಮನೆಯೊಳಗೆ ಹೋದವರು 800 ರಿಂದ 850 ಗ್ರಾಂ ಚಿನ್ನಾಭರಣ,ಹಣ ಕದ್ದು ಪರಾರಿಯಾಗಿದ್ದಾರೆ.ಮನೆಯಲ್ಲಿದ್ದ ಮಾಲೀಕರು ಕೊಡಗಿಗೆ ಹೋದ ಸಮಯವನ್ನೇ ನೋಡಿಕೊಂಡು ಕನ್ನ ಹಾಕಿದ್ದಾರೆ.ಡಿಸಂಬರ್ 31 ರಂದು ಮಾಲೀಕರು ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದ್ದು,ಡಿಸಂಬರ್ 29 ರಿಂದಲೇ ದಂಪತಿ ನಾಪತ್ತೆಯಾಗಿದ್ದಾರೆ.ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾಖಲಿಸಿಕೊಂಡಿರೊ ಜಾಲಹಳ್ಳಿ ಪೊಲೀಸರು ಆರೋಪಿ ಪತ್ತೆಗೆ 2 ವುಶೇಷ ತಂಡ ರಚಿಸಿ ಹುಡುಕಾಟ ನಡೆಸ್ತಿದ್ದಾರೆಇನ್ಮುಂದೆಯಾದ್ರೂ ಸೆಕ್ಯೂರಿಟಿ ನೇಮಕ ಮಾಡುಕೊಳ್ಳೊ ಮುಂಚೆ ನೂರು ಸಾರಿ ಯೋಚನೆ ಮಾಡಿ..ಇಲ್ಲ ಅಂದ್ರೆ ಇಂತಹ ಪರಿಸ್ಥಿತಿ ನಿಮಗೂ ಬಂದ್ರೂ ಬರಬಹುದು ಯಾವುದಕ್ಕೂ ಹುಷಾರ್.