Publish Date: Sat, 08 May 2021 (10:14 IST)
Updated Date: Sat, 08 May 2021 (10:16 IST)
ಚೆನ್ನೈ: ತಮಿಳುನಾಡಿನಲ್ಲೂ ಎರಡು ವಾರಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಸೋಮವಾರದಿಂದ ಮೇ 24 ರವರೆಗೂ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಹೆಚ್ಚುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ಕೂಡಾ ಇದೆ ಎಂದಿತ್ತು. ಅದರ ಬೆನ್ನಲ್ಲೇ ನೂತನ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ.
ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸ್ಟಾಲಿನ್ ಬೇರೆ ದಾರಿಯಿಲ್ಲದೇ ಲಾಕ್ ಡೌನ್ ಮಾಡುವುದಾಗಿ ಹೇಳಿದ್ದಾರೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಸ್ತಬ್ಧವಾಗಲಿದೆ.
Krishnaveni K
Publish Date: Sat, 08 May 2021 (10:14 IST)
Updated Date: Sat, 08 May 2021 (10:16 IST)