ಬೆಂಗಳೂರು: ದೇಶದಲ್ಲಿ ನಿಷೇಧಾಜ್ಞೆ ಈಗಾಗಲೇ ಜಾರಿಯಲ್ಲಿದೆ. ಈ ಲಾಕ್ ಡೌನ್ ನಿಂದ ಬೆಲೆ ಏರಿಕೆ ಕೂಡ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಆಹಾರದ ಬೆಲೆ ಕೂಡ ಹೆಚ್ಚಾಗಿದೆ. ಆನ್ ಲೈನ್ ಡೆಲಿವರಿಯಲ್ಲೂ ಆಹಾರದ ಬೆಲೆ ಹೆಚ್ಚಾಗಿದೆ.
ಮಧ್ಯಮ, ಬಡ ವರ್ಗದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೆಚ್ಚು ದುಡ್ಡು ಕೊಟ್ಟು ಕಡಿಮೆ ತಿನ್ನುವ ಪರಿಸ್ಥಿತಿ ಎದುರಾಗಿದೆ.ಇನ್ನು ತಾವು ಕೊಡುವ ದುಡ್ಡಿಗೆ ಹೊಟ್ಟೆ ತುಂಬ ಆಹಾರ ಸಿಗದೇ ಸಂಕಷ್ಟಿಕ್ಕೀಡಾಗಿದ್ದಾರೆ.ಹೊಟ್ಟೆ ತುಂಬಿಸಿಕೊಳ್ಳಲು ಜನ ಇಂದಿರಾ ಕ್ಯಾಂಟೀನ್ ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳು ತೆರೆದಿಲ್ಲ. ಹಾಗಾಗಿ ಬಡ ಹಾಗೂ ಮಧ್ಯಮ ವರ್ಗದವರು ತೊಂದರೆ ಅನುಭವಿಸುತ್ತಿದ್ದಾರೆ.