ಮಂಗಳೂರು : ಕೊರೊನಾ ತಡೆಗೆ ಲಾಕ್ ಡೌನ್ ಹಿನ್ನಲೆ ಮಂಗಳೂರಿನಲ್ಲಿ ವಿವಿಧೆಡೆ ನಿರಾಶ್ರಿತ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ.
ಮಂಗಳೂರಿನ ಪುರಭವನದಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ ಮಾಡಲಾಗಿದ್ದು, ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಬೆಳಿಗ್ಗೆ ಉಪಾಹಾರ 2 ಬನ್ 1 ಲೋಟ ಟೀ ವ್ಯವಸ್ಥೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಧ್ಯಾಹ್ನ ರಾತ್ರಿ ಊಟ, ಹಾಗೂ ರಾತ್ರಿ ಮಲಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.