Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೃಷಿ ಉತ್ಪನ್ನ ಮಾರಾಟ, ಶೇಖರಣೆಗೆ ಅವಕಾಶ ಕೊಟ್ಟ ಸರಕಾರ

ಕೃಷಿ ಉತ್ಪನ್ನ ಮಾರಾಟ, ಶೇಖರಣೆಗೆ ಅವಕಾಶ ಕೊಟ್ಟ ಸರಕಾರ
ಬೀದರ , ಬುಧವಾರ, 8 ಏಪ್ರಿಲ್ 2020 (17:22 IST)
ಲಾಕಡೌನ್ ನಡುವೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರವು ದಿಟ್ಟ ಕ್ರಮ ತೆಗೆದುಕೊಂಡಿದೆ.

ಜಿಲ್ಲಾ ಮತ್ತು ರಾಜ್ಯಮಟ್ಟದ ಬಾರ್ಡರಗಳನ್ನು ಓಪನ್ ಮಾಡಿ, ಆಹಾರ ಧಾನ್ಯ, ಹಣ್ಣು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ಸರಕು ಸಾಗಣೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

ಬೀದರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರು, ರೈತ ಮುಖಂಡರು, ಜಿಪಂ ಅಧ್ಯಕ್ಷರು, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಹಮಾಲರು ಮತ್ತು ಲಾರಿಗಳು ಬರುತ್ತಿಲ್ಲ ಎನ್ನುವ ದೂರುಗಳು ಕೆಲವು ಕಡೆಗಳಲ್ಲಿ ಕೇಳಿ ಬಂದಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಹಕರಿಸಲು ಅವರಿಗೆ ಮನವೊಲಿಸಿ ಎಂದು ಸೂಚಿಸಲಾಗಿದೆ. ರೈತರ ಪರವಾಗಿ ಸರ್ಕಾರ ಏನು ಮಾಡಬೇಕೋ ಎಲ್ಲವನ್ನು ಮಾಡುತ್ತಿದೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಈ ಜಿಲ್ಲೆಯು ಕೊರೊನಾ ಮುಕ್ತವಾಗುವತ್ತ ಇಟ್ಟಿದೆ ಹೆಜ್ಜೆ