ರಾಜ್ಯ ಸಮ್ಮಿಶ್ರ ಸರ್ಕಾರ ಘೋಷಿಸಿದ್ದ ರೈತರ ಸಾಲಮನ್ನಾ ಯೋಜನೆಯಡಿ ರೈತರಿಗೆ ಋಣಮುಕ್ತ ಪತ್ರ ವಿತರಣೆ ಮಾಡಲಾಯಿತು.
ರೈತರ ಸಾಲಮನ್ನಾ ಮೊದಲ ಹಂತವಾಗಿ 50 ಸಾವಿರ ರೂಪಾಯಿಯವರೆಗೂ ಸಾಲ ಮನ್ನಾ ಋಣಮುಕ್ತ ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ.
ಅರ್ಹ ಫಲಾನುಭವಿ ರೈತರಿಗೆ ಋಣಮುಕ್ತ ಪತ್ರವನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ವಿತರಣೆ ಮಾಡಿದರು.
ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 24 ರೈತರಿಗೆ ಋಣಮುಕ್ತ ಪತ್ರ ವಿತರಣೆ ಮಾಡಿದರು. ಪ್ರಾಯೋಗಿಕವಾಗಿ ಸಾಲಮನ್ನಾವನ್ನು ರಾಜ್ಯದ ಎರಡು ತಾಲೂಕುಗಳಲ್ಲಿ ಜಾರಿಗೆ ತರಲಾಗಿತ್ತು.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕು ಹಾಗೂ ದೊಡ್ಡಬಳ್ಳಾಪುರ ತಾಲೂಕು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ರೈತರ ಸಾಲಮನ್ನಾ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.