Publish Date: Wed, 01 Mar 2023 (14:58 IST)
Updated Date: Wed, 01 Mar 2023 (15:02 IST)
ಸರ್ಕಾರಿ ನೌಕರರ ಮುಷ್ಕರ ಹಿನ್ನಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಸೇವೆಯಿಂದ ದೂರ ಉಳಿದಿದ್ರು. ಓಪಿಡಿ ಸೇವೆಯಿಂದ 400ಕ್ಕೂ ಹೆಚ್ಚು ಕಿಮ್ಸ್ ಸರ್ಕಾರಿ ನೌಕರರು ಹೊರಗುಳಿದಿದ್ರು. ಹೀಗಾಗಿ ಗುತ್ತಿಗೆ ಆಧಾರದ ಸಿಬ್ಬಂದಿಗಳಿಂದ ಓಪಿಡಿ ಸೇವೆ ನೀಡಿದ್ರು. ಕಿಮ್ಸ್ ಆಡಳಿತ ಮಂಡಳಿ ಹೊರ ರೋಗಿಗಳ ವಿಭಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ್ದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಐಸಿಯು ಮತ್ತು ತುರ್ತು ಚಿಕಿತ್ಸಾ ಘಟಕ ಸೇವೆ ಮುಂದುವರೆಸಲಾಗಿದೆ.