Publish Date: Wed, 12 Dec 2018 (18:20 IST)
Updated Date: Wed, 12 Dec 2018 (18:22 IST)
ಇಬ್ಬರು ಯುವಕರ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಬಾಡಗಿ ಗ್ರಾಮದ ಹೊರ ವಲಯದಲ್ಲಿ ಯುವಕರಿಬ್ಬರ ಮೇಲೆ ಚಿರತೆ ದಾಳಿ ಮಾಡಿದೆ.
ಈರಪ್ಪ, ರಾಮು ಇಬ್ಬರು ಹೊಲಕ್ಕೆ ಹೋಗುವಾಗ ಹಿಂದಿನಿಂದ ಏಕಾಏಕಿ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಗಾಯಾಳುಗಳು ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ಐಗಳಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.