Publish Date: Mon, 03 Jul 2023 (15:00 IST)
Updated Date: Mon, 03 Jul 2023 (15:19 IST)
ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಿದೆ.. ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರನ್ನು ಸ್ಪೀಕರ್ ಯು.ಟಿ ಖಾದರ್, ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು.. ರಾಜ್ಯಪಾಲರಿಗೆ ಅಶ್ವದಳ, ಪೊಲೀಸ್ ಬ್ಯಾಂಡ್, ವಾದ್ಯಮೇಳದ ಮೂಲಕ ವಿಶೇಷ ಗೌರವ ನೀಡಲಾಯಿತು.. ಕಾಂಗ್ರೆಸ್ ಗೆದ್ದ ಬಳಿಕ ಮೊದಲ ಅಧಿವೇಶನ ಇದಾಗಿದ್ದು, ಎಲ್ಲಾ ಶಾಸಕರು ಬಹಳ ಉತ್ಸುಕರಾಗಿ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.. ಇನ್ನು ಬಿಜೆಪಿಯಲ್ಲಿ ವಿಪಕ್ಷ ನಾಯಕರ ಆಯ್ಕೆ ವಿಳಂಬದ ಗೊಂದಲದ ನಡುವೆಯೂ ಶಾಸಕರು ಅಧಿವೇಶದಲ್ಲಿ ಭಾಗಿಯಾದರು.. 16 ನೇ ಅಧಿವೇಶನ ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ.