ಬೆಂಗಳೂರು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ನಡೆದುಕೊಂಡು ರೀತಿಗೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಸಚಿವೆ ಉಮಾಶ್ರೀ ವಿರುದ್ಧ ಶಾಸಕರು ಹರಿಹಾಯ್ದಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಉಮಾಶ್ರೀ ಕಾರ್ಯಕರ್ತರ ಪ್ರತಿಭಟನೆ ವಿಚಾರವನ್ನು ನಿಭಾಯಿಸಿದ ರೀತಿಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕಾಂಗ ಸಭೆಯಲ್ಲಿ ಪ್ರತಿಭಟನೆ ವಿಚಾರವಾಗಿ ವಿವರಣೆ ಕೊಡಲು ಸಚಿವೆ ಮುಂದೆ ಬಂದಾಗ ಇತರ ಶಾಸಕರು ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಉಮಾಶ್ರೀ ಬೆಂಬಲಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಕೇಂದ್ರದ ಅನುದಾನ ಕಡಿತಗೊಂಡಿರುವುದರಿಂದ ವೇತನ ಸಮಸ್ಯೆಯಾಗಿದೆ ಎಂದು ಸಮಜಾಯಿಷಿ ಕೊಟ್ಟರು. ಅಲ್ಲದೆ, ಸದನದಲ್ಲಿ ವಿಪಕ್ಷಗಳು ಈ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದರೆ, ಬೆಂಬಲ ಕೊಡಿ ಎಂದೂ ಶಾಸಕರಲ್ಲಿ ಮನವಿ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ