ಚೆನ್ನೈ: ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಶಾಸಕರು ಅಮ್ಮನ ಮೇಲೆ ತಮ್ಮ ನಿಷ್ಠೆ ಏನೆಂದು ಆಗಾಗ ತೋರಿಸಿಕೊಡುತ್ತಾರೆ. ಹೀಗೇ ಮಾಡಲು ಹೋಗಿ ರಾಜ್ಯದ ಹಣಕಾಸು ಸಚಿವ ಡಿ ಜಯಕುಮಾರ್ ಸಂಕಷ್ಟಕ್ಕೀಡಾಗಿದ್ದಾರೆ.
ಈ ಸಾಲಿನ ಬಜೆಟ್ ಮಂಡನೆಗೆ ಮುನ್ನ ಹಣಕಾಸು ಸಚಿವ ಡಿ ಜಯಕುಮಾರ್, ಬಜೆಟ್ ಲೆಕ್ಕ ಪತ್ರಗಳನ್ನು ಅಮ್ಮ ಜಯಲಲಿತಾ ಸಮಾಧಿ ಮೇಲಿಟ್ಟು ಪೂಜೆ ಮಾಡಿದ್ದರು. ಇದೀಗ ಸದನದಲ್ಲಿ ಭಾರೀ ಟೀಕೆಗೊಳಗಾಗಿದೆ.
ವಿರೋಧಿ ಡಿಎಂಕೆ ಶಾಸಕರು ತಮ್ಮ ನಾಯಕ ಸ್ಟಾಲಿನ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದು, ಸದನವೇ ಒಂದು ದಿನದ ಮಟ್ಟಿಗೆ ಮುಂದೂಡುವಂತಾಯಿತು. ಸರ್ಕಾರದ ಲೆಕ್ಕಪತ್ರಗಳನ್ನು ಜಯಲಲಿತಾ ಸಮಾಧಿ ಮೇಲಿರಿಸಿದ್ದು, ಸದನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಿಪಕ್ಷಗಳು ಗದ್ದಲವೆಬ್ಬಿಸಿದವು.
ದಿವಂಗತ ನಾಯಕಿಯ ಆಶೀರ್ವಾದ ಪಡೆಯುವುದು ತಪ್ಪಲ್ಲ. ಆದರೆ ಬಜೆಟ್ ಪತ್ರಗಳನ್ನು ಸದನದ ಹೊರಗೆ ತೆಗೆದುಕೊಂಡು ಹೋಗಿದ್ದು ತಪ್ಪು ಎಂದು ಸ್ಟಾಲಿನ್ ವಾದಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ