ಭ್ರಷ್ಟ ವ್ಯಕ್ತಿಯನ್ನು ಕಾನೂನು ಸಲಹೆಗಾರನಾಗಿ ನೇಮಕ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ದೇಶವಾದರೂ ಏನು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಭ್ರಷ್ಟರಿಗೆ ಮಣೆಹಾಕುತ್ತಿದೆ. ಭ್ರಷ್ಟ ಕಾನೂನು ಸಲಹೆಗಾರ ಮುಖ್ಯಮಂತ್ರಿಗಳಿಗೆ ಯಾವ ರೀತಿ ಸಲಹೆ ನೀಡುತ್ತಾರೆ ಎಂದು ಟಾಂಗ್ ನೀಡಿದರು.
ವಿಕಾಸ್ ಬನ್ಸೋಡೆಯವರಿಗೆ ಕಾನೂನು ಸಲಹೆಗಾರನಾಗಿ ನೇಮಿಸಿ ರಾಜ್ಯ ಸಚಿವನ ಸ್ಥಾನಮಾನ ನೀಡಲಾಗಿದೆ. ಇದೇ ಬನ್ಡೋಡೆ ಟಿಟಿಡಿ ಸಲಹೆಗಾರನಾಗಿದ್ದಾಗ ವ್ಯಾಪಕ ಭ್ರಷ್ಟಾಚಾರ ಮಾಡಿದ್ದರಿಂದ ಅಲ್ಲಿಂದ ಓಡಿಸಲಾಗಿತ್ತು ಎನ್ನುವುದು ಸಿಎಂಗೆ ಗೊತ್ತಿಲ್ಲವೇ ಎಂದು ಟಾಂಗ್ ನೀಡಿದರು.
ಬಿಜೆಪಿಯ ಅಧಿಕಾರವಧಿಯಲ್ಲಿ ಕುಂಠಿತವಾಗಿದ್ದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುವುದು ಎಂದು ಅಧಿಕಾರಕ್ಕೇರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿ ಮತ್ತಷ್ಟು ಕುಂಠಿತವಾಗಿದೆ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.