ಒಂದು ವೇಳೆ ಆರೆಸ್ಸೆಸ್ ಇರದಿದ್ದಲ್ಲಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳು ಪಾಕಿಸ್ತಾನದ ಭಾಗವಾಗುತ್ತಿದ್ದವು ಎನ್ನುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದು ಕೇವಲ ಒಂದು ಭಾವನೆಯು ಎಲ್ಲರಿಗೂ ಪ್ರತಿಧ್ವನಿಸಿತು ಎಂದು ಹೇಳಿಕೆ ನೀಡಿದೆ.
ಯೋಗಿ ಆದಿತ್ಯನಾಥ್ ಏನು ಹೇಳುತ್ತಾನೋ ಅದು ಎಲ್ಲರ ಪ್ರತಿಧ್ವನಿಯಾಗಿತ್ತು ಅದು ಒಂದು ಭಾವನೆ ಮಾತ್ರ.ಈ ದೇಶದಲ್ಲಿ ಆರ್‌ಸ್ಸೆಸ್ ಅತಿದೊಡ್ಡ ರಾಷ್ಟ್ರೀಯ ಸಂಘಟನೆಯಾಗಿದೆ ಮತ್ತು ಈ ಜಗತ್ತಿನಲ್ಲಿ ನಾವು ಭಾರತವನ್ನು ಒಗ್ಗೂಡಿಸುವ ಏಕತೆಯಲ್ಲಿ ನಂಬಿಕೆ ಇಡುತ್ತೇವೆ, ನಾವು ಇತರರನ್ನು ಗೌರವಿಸುತ್ತೇವೆ ಮತ್ತು ಸಹಕರಿಸುತ್ತೇವೆ "ಎಂದು ಬಿಜೆಪಿ ನಾಯಕ ಸೈನಾ ಎನ್ಸಿ ಹೇಳಿದ್ದಾರೆ.
ಭಾರತದಲ್ಲಿ ಪಶ್ಚಿಮ ಬಂಗಾಳ, ಪಂಜಾಬ್ ನಂತಹ ರಾಜ್ಯಗಳು ಅಥವಾ ಜಮ್ಮು ಮತ್ತು ಕಾಶ್ಮೀರದ ಅನೇಕ ಸಾಂಸ್ಕೃತಿಕ ಧಾರ್ಮಿಕ ಧಾರ್ಮಿಕ ನಂಬಿಕೆಗಳು ಮತ್ತು ವಿಭಿನ್ನ ಚಿಂತನೆಯ ಪ್ರಕ್ರಿಯೆಗಳಿದ್ದರೂ ವೈವಿಧ್ಯತೆಯಲ್ಲಿ ಏಕತೆಯನ್ನು ನಂಬಿ ನಾವೆಲ್ಲರು ಒಂದೇ ಎನ್ನುವುದು ಭಾರತ ದೇಶದ ಸೌಂದರ್ಯವಾಗಿದೆ ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರ್‌ಸ್ಸೆಸ್ ಸೂಚನೆ ಮೇರೆಗೆ ಗಾಯಿ, ಗಂಗಾ ಮತ್ತು ಗೋವು ರಕ್ಷ'ದ ವಿಷಯಗಳ ಬಗ್ಗೆ ಅವರ ಸರ್ಕಾರವು "ಕೇಂದ್ರೀಕರಿಸಿದೆ" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ವಿರುದ್ಧ ಪ್ರತಿಪಕ್ಷಗಳು ಆರೋಪಿಸಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.