ನಗರದಲ್ಲಿ ಮಾತನಾಡಿದ ಪರಮೇಶ್ವರ್ ಹೊಸ ವರ್ಷದ ಶುಭಾಷಯಗಳನ್ನ ತಿಳಿಸಿದ್ದಾರೆ.ಜನ ಸಮುದಾಯದ ಹಿತ ಕಾಪಾಡಿಕೊಂಡಿದ್ದಾರೆ.ನಿನ್ನೆ ನಡೆದ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ಆಗಿದೆ.ಯಾವುದೇ ಅಹಿತಕರ ಘಟನೆ ನಡೆಯಬಾರು ಅಂತ ಅಂದುಕೊಂಡ್ವಿ.ಅದರಂತೆ ಪೊಲೀಸವರು ಕೆಲಸ ಮಾಡಿದ್ದಾರೆ.ಅವರಿಗೆ ವಿಶೇಷ ಅಭಿನಂದನೆ ಗಳು.ಇಡೀ ರಾಜ್ಯದ ಜನ ಸಹಕರಿಸಿದ್ದಾರೆ ಅವರಿಗೂ ಧನ್ಯವಾದ.ಸಣ್ಣಪುಟ್ಟ ಘಟನೆ ಬಿಟ್ಟರೆ ಶಾಂತಿಯುತವಾಗಿ ಹೊಸವರ್ಷ ಪ್ರಾರಂಭವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಡಿಸಿಎಂ ನೋಟೀಸ್ ವಿಚಾರವಾಗಿ ಅದು ಇಲಾಖಾವಾರು ಕೆಲಸ ಆಗಿದೆ.ಸಿಬಿಐ ಅವರು ಅವರ ಕೆಲಸ ಮಾಡ್ತಾ ಇದ್ದಾರೆ.ನಾವು ನಮ್ಮ ಕೆಲಸ ಮಾಡ್ತೀವಿ.ಅವರಿಗೆ ಯಾಕೆ ನೋಟೀಸ್ ಕೊಟ್ಟಿದ್ದಾರೆ ಗೊತ್ತಿಲ್ಲ.ಇನ್ನೂ ದೆಹಲಿಗೆ ಸಿಎಂ ಡಿಸಿಎಂ ಹೋಗುವ ವಿಚಾರವಾಗಿ ದೆಹಲಿಯಲ್ಲಿ ಹೈ ಕಮಾಂಡ್ ಸಿಎಂ ಡಿಸಿಎಂ ನ ಕರೆದಿದ್ದಾರೆ.ಅವರು ದೆಹಲಿಗೆ ಹೋಗ್ತಾ ಇದ್ದಾರೆ.ಲೋಕಸಭಾ ಚುನಾವಣೆ ಪ್ರಿಪರೇಷನ್ ಗೆ ಹೋಗ್ತ ಇದ್ದಾರೆ.ನಾವು ನಮ್ಮ ಅಭಿಪ್ರಾಯ ಇವರಿಗೆ ಹೇಳಿದ್ದೇವೆ.ಹಾಗಾಗಿ ನಮಗೆ ಕರೆಯುವ ಅವಶ್ಯಕತೆ ಇಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.
ಪ್ರತಾಪ್ ಸಿಂಹ ಅವರು ತಮ್ಮನ ಬಂಧನ ವಿಚಾರವಾಗಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಇದರಲ್ಲಿ ಯಾವುದೂ ರಾಜಕೀಯ ಇರಬಾರದು.ಮರ ಕಡೆದಿದ್ದಾರೆ ಹಾಗಾಗಿ ಕ್ರಮ ಆಗಿದೆ.ಸಿಎಂ ಮಾಡಿಸಿದ್ದಾರೆ ಅನ್ನೋದು ಸರಿಯಲ್ಲ.ಯಾರೇ ಆದರೂ ಕಾನೂನು ಕ್ರಮ ಆಗಲಿದೆ.ಪ್ರತಾಪ್ ಸಿಂಹ ತಮ್ಮ ಆದರೂ ಸರಿ ಬೇರೆ ಆದರೂ ಸರಿ.ಈ ನೆಲದ ಕಾನೂನಿಗೆ ಬೆಲೆ ಕೊಡಬೇಕಾಗುತ್ತದೆ.ಇಲ್ಲಿ ಒತ್ತಡ ಹಾಕುವುದು ಏನಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ನಾವು ಕೂಡ ಹಿಂದುಗಳೇ,ಬಿಜೆಪಿ ಅವರಷ್ಟೇ ಹಿಂದುಗಳಲ್ಲ.ಹೋಗಬೇಕೋ ಬೇಡವೋ ಅನ್ನೋದನ್ನ ಹೈ ಕಮಾಂಡ್ ತೀರ್ಮಾನ ಮಾಡಲಿದೆ.ರಾಮರಾಜ್ಯ ಅನ್ನೋದು ಎಲ್ಲರಿಗೂ ಇದೆ ಬಿಜೆಪಿಗಷ್ಟೇ ಅಲ್ಲ.ಇಂಡಿಯಾ ಕೂಟಗಳು ರಾಮ ಮಂದಿರ ಉದ್ಘಾಟನೆಗೆ ಹೋಗಬಾರದು ಅನ್ನೋದರ ಬಗ್ಗೆ ದೆಹಲಿ ನಾಯಕರು ತೀರ್ಮಾನ ಮಾಡ್ತಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.