ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರು ಕಾಗವಾಡ ಶಾಸಕರನ್ನು ಅಕ್ರಮವಾಗಿ ಬಂಧಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ರನ್ನು ಅಪಹರಣ ಮಾಡಲಾಗಿದೆ. ಹೀಗಂತ ವಿಧಾನಸಭೆಯಲ್ಲಿ ಡಿ. ಕೆ. ಶಿವಕುಮಾರ್ ಆರೋಪ ಮಾಡಿದ್ದರು. ಸ್ಪೀಕರ್ ತನಿಖೆ ಆದೇಶ ನೀಡಿದ್ದರು.
ಹೀಗಾಗಿ ಶಾಸಕ ಶ್ರೀಮಂತ ಪಾಟೀಲ್ ಮನೆಗೆ ತೆರಳಿದ ಪೊಲೀಸರು ವಿಚಾರಣೆ, ಪರಿಶೀಲನೆ ನಡೆಸಿದ್ದಾರೆ.
ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿರುವ ಮನೆಗೆ ತೆರಳಿದ ಅಥಣಿ ಪೊಲೀಸರ ತಂಡದಲ್ಲಿ ಅಥಣಿ ಡಿ.ವೈ.ಎಸ್.ಪಿ ರಾಮಣ್ಣ ಬಸರಗಿ, ಸಿ ಪಿ ಐ ಎಚ್. ಶೆಖರಪ್ಪ ನೇತೃತ್ವದಲ್ಲಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಶ್ರೀಮಂತ ಪಾಟೀಲ್ ಕುರಿತು ಮಾಹಿತಿ ಕಲೆ ಹಾಕಿದ್ದಾರೆ ಪೊಲೀಸರು. ಶ್ರೀಮಂತ ಪಾಟೀಲ್ ಪುತ್ರ, ಪತ್ನಿ ಹಾಗೂ ಕುಟುಂಬ ಸದಸ್ಯರು ಮುಂಬೈಗೆ ತೆರಳಿದ್ದಾರೆ.