ಹಳೇ ಹುಬ್ಬಳ್ಳಿ ಗಲಾಟೆ ಕೇಸ್ನಲ್ಲಿ ದಿನಕ್ಕೊಂದು ರಹಸ್ಯ ಬಯಲಾಗುತ್ತಿದ್ದು, ಇದೀಗ ಲೇಸರ್ ಲೈಟ್ನಿಂದ ಹುಬ್ಬಳ್ಳಿ ಹೊತ್ತಿ ಉರಿದಿತ್ತು, ಮಸೀದಿ ಮೇಲೆ ಜೈ ಶ್ರೀರಾಮ ಎಂದು ಲೇಸರ್ ಲೈಟ್ ಹಾಕಿದ್ದಕ್ಕೆ ಗಲಭೆಗೆ ಕಾರಣವಾಯ್ತು ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ 3 ತಿಂಗಳಿಂದ ಒಂದು ಗುಂಪಿನ ವಿರುದ್ಧ ಕ್ಯಾಂಪೇನ್ ಮಾಡಲಾಗುತ್ತಿತ್ತು. ರಾಮನವಮಿ ದಿನ ದೊಡ್ಡ ಗಲಾಟೆಯೇ ನಡೆಯಬೇಕಿತ್ತು. ಹುಬ್ಬಳ್ಳಿ ಪೆಂಡಾರ್ ಗಲ್ಲಿ ಮಸೀದಿ ಮೇಲೆ ಲೇಸರ್ ಲೈಟ್ ಹರಿದಾಡಿತ್ತು. ಜೈ ಶ್ರೀರಾಮ ಎಂದು ಲೇಸರ್ ಲೈಟ್ ಹಾಕಿ ಮೆರವಣಿಗೆ ಮಾಡಲಾಗಿತ್ತು. ಮಸೀದಿ ಮೇಲೆ ಲೇಸರ್ ಬಿಡದಂತೆ ಕೆಲ ಯುವಕರು ತಡೆದಿದ್ದರು. ಇದಾದ ಬೆನ್ನಲ್ಲೇ ವಿವಾದಿತ ಪೋಸ್ಟ್ ಹರಿದಾಡಿತ್ತು. ವಸೀಂ ಪಠಾಣ್, ಇರ್ಫಾನ್, ಮಹ್ಮದ್ ಆರಿಫ್ರಿಂದ ಹೋರಾಟಕ್ಕೆ ಕರೆ ಕೊಟ್ಟಿದ್ದು, ಹುಬ್ಬಳ್ಳಿ ಕಿಂಗ್ಸ್ ಅನ್ನೋ ವಾಟ್ಸಾಪ್ ಗ್ರೂಪ್ನಲ್ಲಿ ವಸೀಂ ಪಠಾಣ್ ಕರೆ ನೀಡಿದ್ದ. ತನ್ನ ವಾರ್ಡ್ನ ಎಲ್ಲಾ ಜನರನ್ನು AIMIMನ ಇರ್ಫಾನ್ ಕರೆತಂದಿದ್ದ. ಯುವಕನ ಬಚಾವ್ ಮಾಡಲು ಪೊಲೀಸರು ಅಲರ್ಟ್ ಆಗಿದ್ದರು ಎನ್ನಲಾಗುತ್ತಿದೆ.