Webdunia - Bharat's app for daily news and videos

Install App

ಹಾಸನದಲ್ಲಿ ಜಮೀನು ಗೋಲಮಾಲ್: ಸಚಿವ ರೇವಣ್ಣ ಗುಡುಗಿದ್ದೇನು?

Webdunia
ಶನಿವಾರ, 1 ಸೆಪ್ಟಂಬರ್ 2018 (17:40 IST)
ಹಾಸನ ಜಿಲ್ಲೆಯಲ್ಲಿ  2446 ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ನೀಡಲಾಗಿತ್ತು. ಕೆಲವು ಪ್ರಭಾವಿಗಳು ಪಡೆದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಲೋಕೋಪಯೋಗಿ ‌ಸಚಿವ ಹೆಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಜಮೀನು ಗೋಲ್ ಮಾಲ್ ಭಾರಿ ಪ್ರಮಾಣದಲ್ಲಿ ನಡೆದಿದೆ ಎಂದು ಸ್ವತಃ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಇದಲ್ಲದೇ ಐಐಟಿಗೆ ಮೀಸಲಾಗಿದ್ದ ಜಾಗವನ್ನು ಕಬಳಿಸಲು‌ ಕೆಲವರು ಹುನ್ನಾರ ಮಾಡಿದ್ದಾರೆ. ಇದರಲ್ಲಿ KIADB ಅಧಿಕಾರಿ ಗಳು ಶಾಮೀಲಾಗಿದ್ದಾರೆ. ಈ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು  ರೇವಣ್ಣ ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಶೀಘ್ರ ಸಂಬಂಧಪಟ್ಟವರ ಸಭೆ ಕರೆದು ಎಲ್ಲಾ ಮಾಹಿತಿ ಪಡೆಯುವೆ. ಕಾರ್ಖಾನೆಗೆಂದು ನಮ್ಮ 
ರೈತರ ನೂರಾರು ಎಕರೆ ಜಾಗ ಪಡೆದವರು ಕನ್ನಡಿಗರಿಗೇ  ಕೆಲಸ ಕೊಟ್ಟಿಲ್ಲ ಎಂದು ಹಿಮತ್ ಸಿಂಕಾ ಟೆಕ್ಸ್ ಟೈಲ್ಸ್ ಕಾರ್ಖಾನೆ ವಿರುದ್ಧ ಗಂಭೀರ ಆರೋಪ ಮಾಡಿದರು. ಜಾಗ ಖರೀದಿ ಮಾಡಿ, ಮತ್ತೊಬ್ಬರಿಗೆ ಬಾಡಿಗೆ ಕೊಡುವ ದಂಧೆ ನಡೆಯುತ್ತಿದೆ. ಬಡವರ ಶೋಷಿಸುವವರನ್ನು  ನಾನು ಸಹಿಸಲ್ಲ. ಮಂತ್ರಿಗಿರಿ ಇರುತ್ತೇ, ಹೋಗುತ್ತೇ ಇದನ್ನು ನೆಚ್ಚಿಕೊಂಡು ನಾನು ‌ಕುಳಿತಿಲ್ಲ. ಒಂದು ವಾರ ‌ಕಾಲಾವಕಾಶ ಕೊಡಿ, ಭ್ರಷ್ಟರನ್ನು ಬಲಿ ಹಾಕುತ್ತೇನೆ ಎಂದು ಗುಡುಗಿದರು. ಜಿಲ್ಲೆ & ರಾಜ್ಯದಲ್ಲಿ ಭೂ ಸ್ವಾಧೀನ ವಿಷಯದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಹಾಸನದಲ್ಲಿ ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments