Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಯಶ್ ನಟನೆಯ ಕೆಜಿಎಫ್ 2ಗೂ ಒಂದು ದಿನ ಮೊದಲು ವಿಜಯ್ ನಟನೆಯ ಬೀಸ್ಟ್ ರಿಲೀಸ್ ಆಗುತ್ತಿದೆ. ಏಪ್ರಿಲ್ 13ರಂದು ತೆರೆಕಾಣುತ್ತಿರುವ ಬೀಸ್ಟ್ ಕೂಡ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ. ತಮಿಳಿನಲ್ಲಿ ತಯಾರಾಗಿರುವ ಚಿತ್ರವು ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಲಿದೆ. ಯುಗಾದಿಯಂದು ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿತ್ತು. ಕಮರ್ಷಿಯಲ್ ಮಾಸ್ ಎಂಟರ್ಟೈನರ್ ಚಿತ್ರವಾಗಿರುವ ಬೀಸ್ಟ್ ಕತೆ ಬೇರೆ ಚಿತ್ರದಿಂದ ಪ್ರೇರಿತವಾದದ್ದೇ ಎಂಬ ಚರ್ಚೆಗಳೂ ನಡೆಯುತ್ತಿವೆ. ಅದೇನೇ ಇದ್ದರೂ ವಿಜಯ್ಗೆ ಅಪಾರ ಅಭಿಮಾನಿಗಳಿರುವ ಕಾರಣ, ಅವರ ಚಿತ್ರ ವಿಶ್ವದ ಹಲವೆಡೆ ರಿಲೀಸ್ ಆಗುತ್ತಿದೆ. ಆದರೆ ಚಿತ್ರಕ್ಕೆ ಹೊಸ ಸಮಸ್ಯೆಯೊಂದು ಎದುರಾಗಿದ್ದು, ಕುವೈತ್ ಬೀಸ್ಟ್ ಚಿತ್ರದ ರಿಲೀಸ್ಅನ್ನು ನಿಷೇಧಿಸಿದೆ.ಬೀಸ್ಟ್ ಚಿತ್ರದಲ್ಲಿ ಪಾಕಿಸ್ತಾನದ ಕುರಿತ ವಿಚಾರಗಳು, ಭಯೋತ್ಪಾದನೆ ಹಾಗೂ ಹಿಂಸೆಯ ವೈಭವೀಕರಣವಿರುವುದರಿಂದ ಅನುಮತಿ ನಿರಾಕರಿಸಲಾಗಿದೆ ಎಂದಿದ್ದಾರೆ