Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕುಮಾರಸ್ವಾಮಿ-ಪರಮೇಶ್ವರ್ ಸಮ್ಮಿಶ್ರ ಸರ್ಕಾರದ ಹಕ್ಕಬುಕ್ಕರಂತೆ…

ಕುಮಾರಸ್ವಾಮಿ-ಪರಮೇಶ್ವರ್ ಸಮ್ಮಿಶ್ರ ಸರ್ಕಾರದ ಹಕ್ಕಬುಕ್ಕರಂತೆ…
ಬೆಂಗಳೂರು , ಶುಕ್ರವಾರ, 8 ಮಾರ್ಚ್ 2019 (19:28 IST)
ಸಮ್ಮಿಶ್ರ ಸರ್ಕಾರದಲ್ಲಿ ತಾವು ಮತ್ತು ಪರಮೇಶ್ವರ್ ಹಕ್ಕಬಕ್ಕುರು. ಹೀಗಂತ ಸಿಎಂ ಹೇಳಿಕೊಂಡಿದ್ದಾರೆ.

ವಿಜಯನಗರ ಸಾಮ್ರಾಜ್ಯವನ್ನು ಆಗಿನ ಹಕ್ಕಬುಕ್ಕರು ಕಟ್ಟಿದ್ದರು. ಈಗ ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ತಾವು ಮತ್ತು ಪರಮೇಶ್ವರ್ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕುದುರೆಗೇರಿ ಗ್ರಾಮದಲ್ಲಿ‌ನಡೆದ  ವಸತಿ ಇಲಾಖೆ ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ನಡೆದ 'ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ' ಭೂಮಿಪೂಜೆ ಸಮಾರಂಭಕ್ಕೆ ಜ್ಯೋತಿ ಬೆಳಗುವ ಮೂಲಕ‌ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬಡವರಿಗೆ ಒಳ್ಳೆಯ ಮನೆಗಳನ್ನು ನಿರ್ಮಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಬಡವರಿಗೆ ಮನೆ ಕೊಡುವುದು ನನ್ನ ಮತ್ತು ಪರಮೇಶ್ವರ್ ಉದ್ದೇಶವಾಗಿದೆ.

2 ಲಕ್ಷ ಮನೆ ನಿರ್ಮಿಸಲಾಗುತ್ತಿದ್ದು,‌ ಮೊದಲನೇ ಹಂತದಲ್ಲಿ ಐವತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ‌ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆ ಒಂದು ಲಕ್ಷ ಕೋ.ರೂ.ಕೊಡುವುದು. 9 ತಿಂಗಳಿನಲ್ಲಿ 14 ಲಕ್ಷ ರೈತ ಕುಟುಂಬಗಳಿಗೆ  ಸಾಲಮನ್ನಾ ಮಾಡಲಾಗಿದೆ. ಪ್ರಧಾನಿ ಮೋದಿ ಸುಳ್ಳು ಮಾತುಗಳನ್ನಾಡುತ್ತಿದ್ದಾರೆ. ನರೇಂದ್ರ ಮೋದಿಯವರ ಕಾರ್ಯಕ್ರಮ‌ ಬೆನ್ನಿಗೆ ಚೂರಿ‌ಹಾಕುವ ಸುಳ್ಳಿನ ಕಂತೆ ಎಂದು ಅವರು ಟೀಕಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಪ್ರತಾಪ ಸಿಂಹ ಪೊಲೀಸ್ ವಶಕ್ಕೆ