Publish Date: Tue, 27 Apr 2021 (11:41 IST)
Updated Date: Tue, 27 Apr 2021 (11:42 IST)
ಬೆಂಗಳೂರು : ಭೂಮಿ ಮಾರಾಟ ವಿಚಾರದಲ್ಲಿ ಬಿಜೆಪಿ ಸರ್ಕಾರದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪದ ಮಳೆ ಸುರಿದಿದ್ದಾರೆ.
ಮೈತ್ರಿ ಸರ್ಕಾರದ ಮೇಲೆ ಕಿಕ್ ಬ್ಯಾಕ್ ಆರೋಪ ಮಾಡಿದ್ದರು. ಭೂಮಿ ಮಾರಾಟ ವಿರೋಧಿಸಿ ಹೋರಾಟ ಮಾಡಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಸದ್ದಿಲ್ಲದೆ ಭೂಮಿ ಮಾರಿದೆ. ವಿರೋಧ ಪಕ್ಷದಲ್ಲಿದ್ದಾಗ ಭೂಮಿ ಮಾರಾಟಕ್ಕೆ ವಿರೋಧಿಸಿದ್ರೆ. ಆಡಳಿತಕ್ಕೆ ಬಂದಾಗ ನೀವು ಭೂಮಿ ಮಾರಾಟ ಮಾಡಿದ್ದೀರಿ. ಕದ್ದುಮುಚ್ಚಿ ಭೂಮಿ ಮಾರುವುದು ಬಿಜೆಪಿ ಸಂಸ್ಕೃತಿನಾ? ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಜಿಂದಾಲ್ ವಿರುದ್ಧ ಆನಂದ್ ಸಿಂಗ್ ಪತ್ರ ಬರೆದಿದ್ದರು. ಕಾಂಗ್ರೆಸ್ ಶಾಸಕರಾಗಿದ್ದಾಗ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಜಿಂದಾಲ್ ಈಸ್ಟ್ ಇಂಡಿಯಾ ಕಂಪೆನಿ ಎಂದು ಹೇಳಿದ್ದರು. ಈಗ ಸಚಿವರಾದ ಬಳಿಕ ಹೇಗೆ ಭೂಮಿ ಮಾರಿದ್ದಾರೆ? ಹೆಚ್.ಕೆ.ಪಾಟೀಲ್ ಕೂಡ ಭೂಮಿ ಮಾರಾಟ ವಿರೋಧಿಸಿದ್ದರು. ಮೈತ್ರಿ ಸರ್ಕಾರದ ಭಾಗವಾಗಿದ್ದರೂ ವಿರೋಧ ಮಾಡಿದ್ದರು. ಈಗ ಹೆಚ್.ಕೆ.ಪಾಟೀಲ್ ಏನು ಮಾಡುತ್ತಿದ್ದಾರೆಂದು ಪ್ರಶ್ನೆ. ಅವರ ದಾಖಲೆ ಪತ್ರಗಳೆಲ್ಲವೂ ಎಲ್ಲಿ ಅಡಗಿಕೊಂಡಿವೆ? ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
pavithra
Publish Date: Tue, 27 Apr 2021 (11:41 IST)
Updated Date: Tue, 27 Apr 2021 (11:42 IST)