Select Your Language

Notifications

webdunia
webdunia
webdunia
webdunia

ಫೆ.08 ರಂದು ಕುಡಿಯಡ ಮಂದ್ ನಮ್ಮೆ ಕಾರ್ಯಕ್ರಮ

ಫೆ.08 ರಂದು ಕುಡಿಯಡ ಮಂದ್ ನಮ್ಮೆ ಕಾರ್ಯಕ್ರಮ
bangalore , ಮಂಗಳವಾರ, 8 ಫೆಬ್ರವರಿ 2022 (20:29 IST)
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ನಾಲ್ನಾಡ್ ಕುಡಿಯಡ ಮಂದ್ನಮ್ಮೆ ಸಮಿತಿ ವತಿಯಿಂದ ಯವಕಪಾಡಿಯ ಕುಡಿಯಡ ಮಂದ್ ನಲ್ಲಿ ಫೆಬ್ರವರಿ, 08 ರಂದು ಬೆಳಗ್ಗೆ 10 ಗಂಟೆಗೆ ಕುಡಿಯಡ ಮಂದ್ ನಮ್ಮೆ ಕಾರ್ಯಕ್ರಮ ನಡೆಯಲಿದೆ.   
       ಯವಕಪಾಡಿಯ ಹಿರಿಯ ಜಾನಪದ ಕಲಾವಿದರ ಪಡಿಯಮಲೆ ಗಣೇಶ್ ಬಿದ್ದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಪೊಂಗುರಿ ತ್ರೈಮಾಸಿಕ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. 
      ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿಯಮ್ಮ, ತಮಿಳುನಾಡು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗದ ಸದಸ್ಯರಾದ ಲೀಲಾವತಿ ಧನ್ರಾಜ್, ಕುಂಜಿಲ-ಕಕ್ಕಬ್ಬೆ ಗ್ರಾ.ಪಂ.ಅಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ, ಕುಂಜಿಲ ಕಕ್ಕಬ್ಬೆ ಗ್ರಾ.ಪಂ.ಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಭರತ್ಚಂದ್ರ ದೇವಯ್ಯ, ನಾಲಡಿ ಗ್ರಾಮದ ಹಿರಿಯ ಜಾನಪದ ಕಲಾವಿದರಾದ ಕೋಡಿಮಣಿಯಂಡ ಬೋಪಯ್ಯ, ನಿವೃತ್ತ ಸೇನಾಧಿಕಾರಿ ಕುಯಿನಾಲಮಲೆ ಎಸ್.ಬೋಪಯ್ಯ ಹಾಗೂ ನಾಪೋಕ್ಲು ಹಿರಿಯ ಜಾನಪದ ಕಲಾವಿದರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.  
       ಕೋಪಟ್ಟಿಮಲೆ ರೋಹಿಣಿ ಸುನೀಲ್ ಅವರು ಕುಡಿಯಡ ದೇವನೆಲೆ ವಿಷಯದಲ್ಲಿ ವಿಚಾರ ಮಂಡನೆ ಮಾಡಲಿದ್ದಾರೆ. ಯವಕಪಾಡಿಯ ಹಿರಿಯ ಜಾನಪದ ಕಲಾವಿದರಾದ ಕೋಲಿಂದಮಲೆ ಎ.ಬೋಪಯ್ಯ, ನಾಪೋಕ್ಲು ಹಿರಿಯ ಜಾನಪದ ಕಲಾವಿದರಾದ ಚೀಯಕ್ಪೂವಂಡ ದೇವಯ್ಯ, ಕೊಳಕೇರಿ ಹಿರಿಯ ಜಾನಪದ ಕಲಾವಿದರಾದ ಕುಂಡ್ಯೋಳಂಡ ಸುಬ್ಬಯ್ಯ ಮತ್ತು ಕೋಪಟ್ಟಿ ಗ್ರಾಮದ ಕಿರಿಯ ಕರಾಟೆಪಟು ಕೆ.ಪಿ.ಚಂಗಪ್ಪ ಚೇತನ್ ಅವರನ್ನು ಸನ್ಮಾನಿಸಲಾಗುವುದು.  
      ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕುಡಿಯರ ಮುತ್ತಪ್ಪ ಅವರು ಸಂಚಾಲಕರಾಗಿ ಕೆಲಸ ನಿರ್ವಹಿಸಲಿದ್ದಾರೆ. ಅಲ್ಲದೆ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು, ಹಳೆಯ ಪರಿಕರದ ವಸ್ತು ಪ್ರದರ್ಶನ ಹಾಗೂ ಅಕಾಡೆಮಿ ಪ್ರಕಟಿತ ಪುಸ್ತಕ ಮತ್ತು ಸಿ.ಡಿ.ಗಳ ಪ್ರದರ್ಶನ ಮತ್ತು ಮಾರಾಟ ಜರುಗಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.  ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಸಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯನಿರತ ಪತ್ರಕರ್ತರ ಸಂಘ; ಚುನಾವಣಾ ವೇಳಾಪಟ್ಟಿ ಪ್ರಕಟ