ಕೊಪ್ಪಳ: ಚಾಲಕನೊಬ್ಬ ಬಿಂದಾಸ್ ಆಗಿ ಸಿಗರೇಟ್ ಸೇದುತ್ತಾ ಕೆಎಸ್‌ಆರ್‌ಟಿಸಿ ಬಸ್ ಚಾಲನೆ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಕರ್ನಾಟಕದ ದೇವರಾದ ಆಂಜನೇಯಸ್ವಾಮಿ ಚಿತ್ರವನ್ನು ತಕ್ಷಣಕ್ಕೆ ತೆಗೆದು ಹಾಕುವಾಗ ಇಂತಹ ವ್ಯಕ್ತಿಯ ವಿರುದ್ಧ ಯಾವಾಗ ಕ್ರಮ ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್‌ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಚಾಕಲನ ಕರ್ತವ್ಯವಾಗಿದೆ. ಬಸ್ ಚಾಲನೆ ಮಾಡುವಾಗ ಮೊಬೈಲ್ ಬಳಕೆ, ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ಆದರೂ ಕೂಡ ನಿಪ್ಪಾಣಿ ಘಟಕದ ಬಸ್ ಚಾಲಕ ಧೂಮಪಾನ ಮಾಡುತ್ತ ವಾಹನ ಓಡಿಸಿದ್ದಾನೆ.
ನಿಪ್ಪಾಣಿ ಘಟಕಕ್ಕೆ ಸೇರಿದ ಕೆಎ 23, ಎಫ್ 1045 ನಂಬರ್ನ ಕೆಎಸ್‌ಆರ್‌ಟಿಸಿ ಬಸ್ ಗಂಗಾವತಿಯಿಂದ ಕೋಲ್ಹಾಪುರಕ್ಕೆ ತೆರಳುತ್ತಿತ್ತು.
ಚಾಲಕ ಬೀಡಿ ಸೇದುತ್ತಾ ಬಸ್ ಚಲಾಯಿಸಿದ್ದಾನೆ. ಚಾಲಕ ಧೂಮಪಾನ ಮಾಡುವುದನ್ನು ಅಲ್ಲೇ ಕುಳಿತಿದ್ದ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದ್ದಾನೆ. ಈ ಬಗ್ಗೆ ಪ್ರಯಾಣಿಕರು ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.