Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಿವಮೊಗ್ಗ: ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಬಾಗಲಕೋಟೆಗೆ ಹೊರಟರೆ ಕೆಲವರು ತಪ್ಪಾಗಿ ಭಾವಿಸಿ ಏನೇನೋ ಸುದ್ದಿ ಹಬ್ಬಿಸ್ತಾರಂತೆ! ಹಾಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಬಾಗಲಕೋಟೆಗೆ ಹೋದರೆ ಸಾಕು. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ ಎಂದು ಜನ ತಪ್ಪಾಗಿ ಭಾವಿಸ್ತಾರೆ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಆದರೆ ಇದೀಗ ತಾವು ಬಾಗಲಕೋಟೆಗೆ ಹೋಗುತ್ತಿರುವುದು ಬ್ರಿಗೇಡ್ ನ ಮಾಜಿ ಅಧ್ಯಕ್ಷರೊಬ್ಬರ ಮಕ್ಕಳ ಮದುವೆಗೆ ಹೋಗುತ್ತಿದ್ದೇನೆ. ಇದರಲ್ಲಿ ಬೇರೇನೂ ಉದ್ದೇಶವಿಲ್ಲ. ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.