Publish Date: Sun, 22 Jul 2018 (15:17 IST)
Updated Date: Sun, 22 Jul 2018 (15:23 IST)
ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಕೆ.ಆರ್.ಎಸ್ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಕೆಆರ್ ಎಸ್ ಜಲಾಶಯದಲ್ಲಿ ಕನ್ನಡ ಪರ ಹೋರಾಟಗಾರ 101 ತೆಂಗಿನಕಾಯಿ ಒಡೆದಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ ಆರ್ ಎಸ್ ಜಲಾಶಯ ಭರ್ತಿಯಾಗಿದೆ. ಹೀಗಾಗಿ ತುಂಬಿ ಹರಿಯುತ್ತಿರುವ ಜಲಾಶಯಕ್ಕೆ ವಿಶೇಷ ಕಳೆ ಬಂದಿದೆ. ರೈತರು ಕೂಡ ಸಂಭ್ರಮದಲ್ಲಿದ್ದಾರೆ. ಏತನ್ಮಧ್ಯೆ ಕೆ ಆರ್ ಎಸ್ ನಲ್ಲಿ 101 ತೆಂಗಿನಕಾಯಿ ಒಡೆದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗಮನ ಸೆಳೆದಿದ್ದಾರೆ.
ಜಲಾಶಯ ಭರ್ತಿಯಾದ ಹಿನ್ನಲೆ ಕಾವೇರಿ ತಾಯಿಗೆ ವಾಟಾಳ್ ನಾಗರಾಜ್ ರಿಂದ ವಿಷೇಷ ಪೂಜೆ ಸಲ್ಲಿಕೆಯಾಯಿತು. ಆ ಬಳಿಕ ಕಾವೇರಿ ತಾಯಿಯ ಪ್ರತಿಮೆಗೆ ಪೂಜೆ ಸಲ್ಲಿಸಿ 101ತೆಂಗಿನಕಾಯಿಗಳನ್ನು ವಾಟಾಳ್ ಒಡೆದರು.