Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆಆರ್ ಎಸ್ ಜಲಾಶಯದ 153 ಗೇಟ್ ಕಂಪ್ಯೂಟರೀಕರಣ

ಕೆಆರ್ ಎಸ್ ಜಲಾಶಯದ 153 ಗೇಟ್ ಕಂಪ್ಯೂಟರೀಕರಣ
bangalore , ಮಂಗಳವಾರ, 6 ಜುಲೈ 2021 (19:18 IST)
ಕೆಆರ್ ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಡ್ಯಾಂ ಗೇಟ್ ನ ದುರಸ್ಥಿ ಕಾರ್ಯ ಪ್ರಗತಿಯಲ್ಲಿರುವುದು ಬೆಳಕಿಗೆ ಬಂದಿದೆ.
ಕೆಆರ್ ಎಸ್ ಡ್ಯಾಂನಲ್ಲಿ ಗೇಟ್ ಬದಲಾವಣೆ ಕೆಲಸ ನಡೆಯುತ್ತಿದೆ. ಜಲಾಶಯದಲ್ಲಿ ಒಟ್ಟು 173 ಗೇಟ್ ಗಳಿದ್ದು, ಈ ಪೈಕಿ 136 ಗೇಟ್ ಗಳ ಬದಲಾಯಿಸಲಾಗುತ್ತಿದೆ.
ಗುಜರಾತ್ ನ ಅಹಮದಬಾದ್ ಮೂಲದ ಖಾಸಗಿ ಕಂಪನಿಗೆ ಡ್ಯಾಂನ ಗೇಟ್ ಗಳ ಕಂಪ್ಯೂಟರೀಕರಣ ಗುತ್ತಿಗೆ ನೀಡಲಾಗಿದ್ದು, ಸುಮಾರು 69 ಕೋಟಿ ರೂ. ವೆಚ್ಚದಲ್ಲಿ 158 ಗೇಟ್ ಗಳನ್ನ ಸೇರಿಸಿ ಕಂಪ್ಯೂಟರೀಕರಣಗೊಳಿಸುವ ಯೋಜನೆ ಇದಾಗಿದೆ. 
ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷದ ಜೂನ್ ತಿಂಗಳ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್ ಅಬ್ಬರ ಹಾಗೂ ಲಾಕ್ ಡೌನ್ ಗಳಿಂದಾಗಿ ಈ ಯೋಜನೆ ವಿಳಂಬವಾಗಿತ್ತು. ಗೇಟ್ ಗಳ ಜೋಡಣೆ ಪೂರ್ಣಗೊಂಡರೆ ಡ್ಯಾಂ ಮತ್ತಷ್ಟು ಸುರಕ್ಷಿತವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಸರಣಿಗೂ 2 ದಿನ ಮುನ್ ಇಂಗ್ಲೆಂಡ್ ತಂಡದ 7 ಮಂದಿಗೆ ಕೊರೊನಾ ಪಾಸಿಟಿವ್!