Publish Date: Mon, 03 Aug 2026 (12:28 IST)
Updated Date: Mon, 03 Aug 2026 (12:31 IST)
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ಜೊತೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡ ಸಚಿವ ಕೃಷ್ಣಭೈರೇಗೌಡ ಭರ್ಜರಿ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.
ಸಚಿವ ಕೃಷ್ಣಭೈರೇಗೌಡ ತಮ್ಮ ಖಡಕ್ ಕೆಲಸಗಳಿಂದ, ಜನರೊಂದಿಗೆ ಬೆರೆಯುವ ಸರಳ ಗುಣದಿಂದ ಇಷ್ಟು ದಿನ ಗುರುತಿಸಿಕೊಂಡಿದ್ದವರು. ಆದರೆ ಚಂದನ್ ಶೆಟ್ಟಿ ಜೊತೆ ಜಲ ಹಬ್ಬ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡ ಸಚಿವರು ತಮ್ಮ ಇನ್ನೊಂದು ಮುಖವನ್ನು ಜನರಿಗೆ ಪರಿಚಯಿಸಿದ್ದಾರೆ.
ಜಲ ಹಬ್ಬ ಕಾರ್ಯಕ್ರಮದ ಅದ್ಧೂರಿ ವೇದಿಕೆಯಲ್ಲಿ ಚಂದನ್ ಶೆಟ್ಟಿ ಪೊಗರು ಹಾಡು ಹಾಡುತ್ತಿದ್ದರು. ತಾವೂ ಕುಣಿದು, ಇತರರನ್ನೂ ಕುಣಿಸಿ ಕಾರ್ಯಕ್ರಮ ಕೊಡುವುದು ಅವರ ಸ್ಟೈಲ್. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರನ್ನೂ ಚಂದನ್ ಶೆಟ್ಟಿ ಸುಮ್ಮನೇ ಕೂರಲು ಬಿಡಲಿಲ್ಲ.
ವೇದಿಕೆಗೆ ಕರೆತಂದು ಪೊಗರು ಹಾಡಿಗೆ ಸ್ಟೆಪ್ಸ್ ಹಾಕಿಸಿದ್ದಾರೆ. ಸಂಕೋಚದಿಂದಲೇ ವೇದಿಕೆಗೆ ಬಂದ ಕೃಷ್ಣಬೈರೇಗೌಡ ಕೊನೆಗೆ ಚಂದನ್ ಹೇಳಿಕೊಟ್ಟಂತೆ ಎರಡು ಸ್ಟೆಪ್ಸ್ ಹಾಕಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ