ರಾಜ್ಯದಲ್ಲಿ ಕೋವಿಡ್ ಕೇಸು ದಿಢೀರ್ ಏರಿಕೆ!

Webdunia
ಬುಧವಾರ, 8 ಜೂನ್ 2022 (10:43 IST)
ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಏರುಗತಿ ಮುಂದುವರಿದಿದೆ.

ಮಂಗಳವಾರ 348 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.2.11ಕ್ಕೆ ಜಿಗಿದಿದೆ. ತನ್ಮೂಲಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮೂರು ತಿಂಗಳ ನಂತರ ಮುನ್ನೂರರ ಗಡಿ ದಾಟಿದಂತಾಗಿದೆ.

ಮೂರನೇ ಅಲೆ ನಿಸ್ತೇಜಗೊಳ್ಳುತ್ತ ಬಂದ ಅವಧಿಯಾದ ಮಾಚ್ರ್ 3ರಂದು 382 ಮಂದಿಯಲ್ಲಿ ಸೋಂಕು ಪತ್ತೆಯಾದ ಮೂರು ತಿಂಗಳ ಬಳಿಕ ಒಂದೇ ದಿನದ ಸೋಂಕು ಗರಿಷ್ಠ 350ರ ಸಂಖ್ಯೆ ಸಮೀಪಿಸಿದೆ. ಮಂಗಳವಾರ 311 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್ ಸಾವು ವರದಿಯಾಗಿಲ್ಲ. 16,474 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಏಪ್ರಿಲ್, ಮೇನಲ್ಲಿ ಶೇ.0.23ರ ತನಕ ಕುಸಿದಿದ್ದ ಪಾಸಿಟಿವಿಟಿ ದರ ಈಗ ಶೇ. 2ರ ಗಡಿ ದಾಟಿದೆ.

ಬೆಂಗಳೂರು ನಗರದಲ್ಲಿ 339 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಉಡುಪಿ 3, ಉತ್ತರಕನ್ನಡ, ಉಡುಪಿ, ಮೈಸೂರು, ರಾಯಚೂರು, ಕೋಲಾರ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಡ್ಡಮತದಾನ ಮಾಡಿದವರ ವಿರುದ್ಧ ಕೇಂದ್ರ ನಾಯಕರು ಶೀಘ್ರ ಕ್ರಮ ಕೈಗೊಳ್ತಾರೆ: ಛಲವಾದಿ ನಾರಾಯಣಸ್ವಾಮಿ

ಮುಂಬೈ ಲೋಕಲ್ ಟ್ರೈನ್ ನಲ್ಲಿ ಬಾಗಿಲು ಮುಚ್ಚುವ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ: ಭೀಕರ Video

ಕೇತನ್ ಅಗರ್ವಾಲ್ ಹತ್ಯೆ ಮಾಡುವ ಕೆಲವೇ ಗಂಟೆ ಮುಂಚೆ ಸಿಯಾ ಮಾಡಿದ ಕೆಲಸವೇನು ಗೊತ್ತಾ: ಶಾಕಿಂಗ್

ಪೆರಿಯಾರ್ ಹೇಳಿದ್ದನ್ನೆಲ್ಲಾ ನಾವು ಒಪ್ಪಲ್ಲ, ನಮಗೆ ದೇವರ ಮೇಲೆ ನಂಬಿಕೆಯಿದೆ ಎಂದ ಸಿಎಂ ವಿಜಯ್

ಕಾಂಗ್ರೆಸ್ ನವರು ಬದನೆಕಾಯಿ ಬೆಳೆದು ಆಸ್ತಿ ಮಾಡವ್ರಾ, ಗಂಡಸ್ತನದ ರಾಜಕಾರಣ ಮಾಡಿ: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments