ಅರೇಬಿಕ್ ಶಿಕ್ಷಕಿ ಹುದ್ದೆ ಕೊಡಿಸುವುದಾಗಿ ಕೊಪ್ಪಳ ಮೂಲದ ಮಹಿಳೆಯನ್ನ ಸೌದಿ ಅರೇಬಿಯಾಗೆ ಕರೆದೊಯ್ದು ಕಸ ಗುಡಿಸುವ ಕೆಲಸ ಕೊಟ್ಟು ಹಿಂಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರು ಮೂಲದ ಏಜೆಂಟ್ ಶಂಶೀರ್ ಎಂಬಾತ ಬಾಬಾಜಾನ್ ಪತ್ನಿ ಚಾಂದ್ ಸುಲ್ತಾನಾ ಎಂಬುವವರಿಗೆ 40 ಸಾವಿರ ರೂ. ಸಂಬಳದ ಅರೇಬಿಕ್ ಬೋಧನಾ ಕೆಲಸ ಕೊಡಿಸುವುದಾಗಿ ಕರೆದೊಯ್ದಿದ್ದಾನೆ. ಇದಕ್ಕಾಗಿ ಶಂಶೀರ್`ಗೆ ಬಾಬಾಜಾನ್ 50 ಸಾವಿರ ರೂ. ಹಣವನ್ನೂ ನೀಡಿದ್ದಾನೆ. ಆದರೆ, ಸೌದಿಯಲ್ಲಿ ಮಹಿಳೆಗೆ ಕಸ ಗುಡಿಸುವ ಕೆಲಸ ಕೊಟ್ಟಿರುವುದಲ್ಲದೆ, ಕೊಠಡಿಯಲ್ಲಿ ಕೂಡಿ ಹಾಕಿ ಕೇವಲ ಬ್ರೆಡ್ ಪೀಸ್`ಗಳನ್ನ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೇರೆಯವರ ಸಹಾಯದೊಂದಿಗೆ ಪತಿಗೆ ಕರೆ ಮಾಡಿದ್ದ ಚಾಂದ್ ಸುಲ್ತಾನಾ ತನ್ನ ಸ್ಥಿತಿ ಬಗ್ಗೆ ಪತಿಗೆ ತಿಳಿಸಿದ್ದಾಳೆ.
ತನ್ನನ್ನ ಊರಿಗೆ ಕಳುಹಿಸಿ ಎಂದು ಚಾಂದ್ ಸುಲ್ತಾನಾಮಾಲೀಕನನ್ನ ಕೇಳಿದರೆ ಏಜೆಂಟರ್`ಗೆ 4 ಲಕ್ಷ ರೂ. ನೀಡಿದ್ದೇನೆ. ಅದನ್ನ ಕೊಟ್ಟು ಹೋಗು ಎನ್ನುತ್ತಿದ್ದಾರಂತೆ. ಘಟನೆ ಬಗ್ಗೆ ಸಂಸದ ಕರಡಿ ಸಂಗಣ್ಣ ಗಮನ ಸೆಳೆದಿದ್ದು, ನೆರವಿನ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ