Select Your Language

Notifications

webdunia
webdunia
webdunia
webdunia

KN Rajanna: ಸಿದ್ದರಾಮಯ್ಯನದ್ದು ಸ್ವಚ್ಛ ಹೃದಯ, ಶ್ರೀಮಂತ ಹೃದಯ ರೀ..: ಕೆಎನ್ ರಾಜಣ್ಣ

KN Rajanna

Krishnaveni K

ಬೆಂಗಳೂರು , ಗುರುವಾರ, 1 ಮೇ 2025 (15:18 IST)
ಬೆಂಗಳೂರು: ಎಎಸ್ ಪಿಗೆ ವೇದಿಕೆಯಲ್ಲೇ ಕೈ ಮಾಡಲು ಹೊರಟ ಸಿಎಂ ಸಿದ್ದರಾಮಯ್ಯನವರನ್ನು ಸಮರ್ಥಿಸಿದ ಸಚಿವ ಕೆಎನ್ ರಾಜಣ್ಣ ಅವರದ್ದು ಸ್ವಚ್ಛ ಹೃದಯ, ಶ್ರೀಮಂತ ಹೃದಯ ಎಂದು ಕೊಂಡಾಡಿದ್ದಾರೆ.

ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಎಎಸ್ ಪಿಯವರನ್ನು ವೇದಿಕೆಗೆ ಬಾರಯ್ಯಾ ಎಂದು ಏಕವಚನದಲ್ಲಿ ಕರೆದು ಹೊಡೆಯಲು ಹೋದ ವಿಡಿಯೋ ಭಾರೀ ವೈರಲ್ ಆಗಿತ್ತು. ಇದು ವಿಪಕ್ಷಗಳ ಟೀಕೆಗೆ ಆಹಾರವಾಗಿತ್ತು.

ಈ ಘಟನೆ ಬಗ್ಗೆ ಇಂದು ಮಾಧ್ಯಮಗಳು ಸಚಿವ ರಾಜಣ್ಣನನ್ನು ಪ್ರಶ್ನಿಸಿದಾಗ ‘ಯಾರ್ರೀ ಹೇಳಿದ್ದು ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಅಂತ? ಸಿಎಂ ಸಿದ್ದರಾಮಯ್ಯನವರದ್ದು ಮಾತು ಒರಟಿರಬಹುದು. ಆದರೆ ಹೃದಯ ಮಾತ್ರ ಸ್ವಚ್ಛ ಹೃದಯ, ಶ್ರೀಮಂತ ಹೃದಯ ಮತ್ತು ಬಡವರ ಪರ ಹೋರಾಡುವ ಗುಣವಿರುವ ಹೃದಯ. ಅದರ ಬಗ್ಗೆ ಹೇಳಿ’ ಎಂದಿದ್ದಾರೆ.

‘ಯಾರಿಗೂ ಹೊಡೆಯುವ ಸ್ವಭಾವ ಅವರದ್ದಲ್ಲ. ಅದೆಲ್ಲಾ ನೀವು ಮಾಧ್ಯಮದವರ ಸೃಷ್ಟಿ. ವಿಪಕ್ಷದವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅದಕ್ಕೇ ಇಂತಹ ವಿಚಾರವನ್ನೆಲ್ಲಾ ದೊಡ್ಡು ಮಾಡುತ್ತಾರೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಂಪು ಹಲ್ಲೆಯಿಂದ ಮೃತಪಟ್ಟ ಪ್ರಕರಣ: ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಸಹಿತ ಮೂವರು ಅಮಾನತು