Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಾಕ್ ಡೌನ್ ಸಡಿಲಿಕೆ ನಡುವೆ ಯುವತಿಯ ಕಿಡ್ನಾಪ್

ಲಾಕ್ ಡೌನ್ ಸಡಿಲಿಕೆ ನಡುವೆ ಯುವತಿಯ ಕಿಡ್ನಾಪ್
ಕಲಬುರಗಿ , ಬುಧವಾರ, 20 ಮೇ 2020 (19:50 IST)
ಕೊರೊನಾ ವೈರಸ್ ತಡೆಗೆ ಜಾರಿಮಾಡಿದ್ದ ಲಾಕ್ ಡೌನ್ ನಾಲ್ಕನೇ ಹಂತದಲ್ಲಿ ಸಡಿಲಿಕೆ ಸಿಗುತ್ತಿದ್ದಂತೆ ಯುವತಿಯೊಬ್ಬಳನ್ನು ಅಪಹರಣ ಮಾಡಲಾಗಿದೆ.

ಕಲಬುರಗಿ ನಗರ ಹೊರವಲಯದ ನಂದೂರು ಕೆ ಗ್ರಾಮದ 17 ವರ್ಷದ ಯುವತಿಯನ್ನು ಕಿಡ್ನಾಪ್ ಮಾಡಲಾಗಿದೆ.
ಅಪಹರಣ ಕೃತ್ಯಕ್ಕೆ ಯುವಕನೊಬ್ಬನ ಕುಟುಂಬದವರು ಸಹಕಾರ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿಯ ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸುರೇಶ್ ತಂದೆ ಲಕ್ಷ್ಮಣ ಎಂಬಾತ ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವತಿ ಪತ್ತೆಗೆ ಬಲೆ ಬೀಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಕೋಟಿ ಬಡವರಿಗೆ ಉಚಿತ ಚಿಕಿತ್ಸೆ : ಮೋದಿ ಟ್ವೀಟ್